*38 ಕಾಡಾನೆಗಳ ಹಿಂಡು ಮತ್ತೆ ವಾಪಸ್*: *ಅರಣ್ಯ ಇಲಾಖೆಗೆ ಸವಾಲಾದ ಒಂಟಿ ಸಲಗ*

ಪ್ರಗತಿವಾಹಿನಿ ಸುದ್ದಿ: ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಕಾಡಾನೆಗಳ ಕಾಟದಿಂದ ಮುಕ್ತಿ ಸಿಗುವ ಲಕ್ಷಣ ಕಾಣುತ್ತಿಲ್ಲ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಓಡಿಸಲಾಗಿದ್ದ ಆನೆಗಳ ಹಿಂಡು ಮತ್ತೆ ವಾಪಸ್ ಬಂದಿದೆ. ಬರೋಬ್ಬರಿ 38 ಕಾಡಾನೆಗಳನ್ನು ಚಿಕ್ಕಮಗಳೂರಿನಿಂದ ಹಾಸನದ ಬೇಲೂರು ತಾಲೂಕಿಗೆ ಓಡಿಸಲಾಗಿದೆ. ಈ ಕಾರ್ಯಾಚರಣೆ ವೇಳೆ ಎರಡು ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ವಿರೋಧವೂ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಚಿಕ್ಕಮಗಳೂರು ಸಿಸಿಎಫ್ ಮತ್ತು ಡಿಎಫ್‌ಒ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಚಿಕ್ಕಮಗಳೂರು ಭಾಗದಲ್ಲಿದ್ದ 38 ಕಾಡಾನೆಗಳನ್ನು … Continue reading *38 ಕಾಡಾನೆಗಳ ಹಿಂಡು ಮತ್ತೆ ವಾಪಸ್*: *ಅರಣ್ಯ ಇಲಾಖೆಗೆ ಸವಾಲಾದ ಒಂಟಿ ಸಲಗ*