*ಬೆಳಗಾವಿಯಲ್ಲಿ ನಡೆದ 39ನೇ ಕಾಂಗ್ರೇಸ್ ಅಧಿವೇಶನ – ಒಂದು ಹಿನ್ನೋಟ*; *ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕಮೇವ ಕಾಂಗ್ರೇಸ್‌ ಅಧಿವೇಶನ*

(1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷ. ಶತಮಾನೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ಸರಕಾರ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈ ಲೇಖನ) ರವೀಂದ್ರ ದೇಶಪಾಂಡೆ 1923 ರಲ್ಲಿ ಆಗಿನ ಅಖಂಡ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ 38ನೆಯ ಕಾಂಗ್ರೆಸ್‌ ಅಧಿವೇಶನದಲ್ಲಿ, ಅಧ್ಯಕ್ಷ ಶ್ರೀ ಮೊಹಮ್ಮದಅಲಿಯವರು, ಶ್ರೀ ಜವಾಹರಲಾಲ ನೆಹರು ಹಾಗೂ ಶ್ರೀ ಗಂಗಾಧರರಾವ್‌ ದೇಶಪಾಂಡೆಯವರನ್ನು ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಿದರು. ಅಧಿವೇಶನದ ಕೊನೆಯಲ್ಲಿ, ಮುಂದಿನ ಅಧಿವೇಶನ ಅಂದರೆ 1924 ರ ಅಧಿವೇಶನವನ್ನು  ಕರ್ನಾಟಕದಲ್ಲಿ ನಡೆಸುವಂತೆ, ದೇಶಪಾಂಡೆಯವರು ವಿನಂತಿಸಿಕೊಂಡರು. ಅದಕ್ಕೆ ಕಾಂಗ್ರೇಸ್‌ ವರ್ಕಿಂಗ ಕಮೀಟಿ, ಸರ್ವಾನುಮತದಿಂದ ಒಪ್ಪಿ, ಕರ್ನಾಟಕದಲ್ಲಿ  ಅಧಿವೇಶನ ನಡೆಯಬೇಕಾದ  ಸ್ಥಳವನ್ನು ನಿರ್ಧರಿಸುವ  ಅಧಿಕಾರವನ್ನು ಪ್ರದೇಶ  ಕಾಂಗ್ರೇಸ್‌ ಸಮೀತಿಗೆ ಬಿಟ್ಟುಕೊಟ್ಟಿತು. ಹಾಗೂ ಆ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿಯವರು ವಹಿಸಬೇಕೆಂದು ಗಂಗಾಧರರಾವ್‌ ದೇಶಪಾಂಡೆಯವರು ವಿನಂತಿಸಿಕೊಂಡರು. ಪ್ರಾರಂಭದಲ್ಲಿ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಳ್ಳಲು ಗಾಂಧೀಜಿ ನಿರಾಕರಿಸಿದರು. ಈ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಗಂಗಾದರರಾವ್ ಅವರ ಮುಂದೆ ವ್ಯಕ್ತಪಡಿಸುತ್ತ “ಅಧಿವೇಶನದ ಅಧ್ಯಕ್ಷತೆಯನ್ನು ವಹಿಸುವ ಬಗ್ಗೆ ನನ್ನ ನಿರ್ಣಯವನ್ನು ನೀವು ಒಪ್ಪಲಿಕ್ಕಿಲ್ಲ.  ಈ ಕುರಿತು ದೀರ್ಘವಿಚಾರ ವಿಮರ್ಶೆ ಮಾಡಿದ ನಂತರ, ನಾನು ನನ್ನ ಇಚ್ಛೆಯಂತೆ  ಪೂರ್ತಿ ಸ್ವತಂತ್ರನಾಗಿರಬಯಸುತ್ತೇನೆ. ಸಮಯ ಬಂದಾಗ ನಾನು ಈ ಎಲ್ಲ ಕ್ರಿಯೆಗಳಿಂದ ನಿವೃತ್ತನಾಗಬೇಕೆಂದು ನನ್ನ ಇಚ್ಛೆ. ಆದರೆ ನಾನು ಈಗ ಅಧಿವೇಶನದ ಅಧ್ಯಕ್ಷತೆ ವಹಿಸಿದರೆ, ನನಗೆ ಅದು ಸಾಧ್ಯವಾಗುವುದಿಲ್ಲ. ನಾನು ಅಧ್ಯಕ್ಷ ಸ್ಥಾನದಲ್ಲಿರಲಿ  ಅಥವಾ ಇಲ್ಲದೆ ಇರಲಿ, ನಾವು ನಮ್ಮ ಯೋಜನೆಗಳನ್ನು ಕಾರ್ಯಾಗತಗೊಳಿಸಲು ಯಾವದೇ ನಿರ್ಬಂಧವಿಲ್ಲ”. … Continue reading *ಬೆಳಗಾವಿಯಲ್ಲಿ ನಡೆದ 39ನೇ ಕಾಂಗ್ರೇಸ್ ಅಧಿವೇಶನ – ಒಂದು ಹಿನ್ನೋಟ*; *ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕಮೇವ ಕಾಂಗ್ರೇಸ್‌ ಅಧಿವೇಶನ*