*7.11 ಕೋಟಿ ಹಣ ದರೋಡೆ: ಇಬ್ಬರು ಖದೀಮರನ್ನು ವಶಕ್ಕೆ ಪಡೆದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ 7 ಕೋಟಿ 11 ಲಕ್ಷ ಹಣ ದರೋಡೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ತೂರು ಬಳಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಘಟನೆಯ ನಂತರ ತನಿಖೆ ಆರಂಭಿಸಿದ ಪೊಲೀಸರು ಇದೀಗ ಆಂಧ್ರಪ್ರದೇಶದ ಚಿತ್ತೂರು ಬಳಿ ಇಬ್ಬರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಆರೋಪಿಗಳು ಬಾಣಸವಾಡಿಯ ಕಲ್ಯಾಣನಗರದ ನಿವಾಸಿಗಳು ಎಂದು ಹೇಳಲಾಗಿದೆ. ಚಿತ್ತೂರು ತಿರುಪತಿ ಸುತ್ತಮುತ್ತ ಓಡಾಡುತ್ತಾ ತಲೆಮರೆಸಿಕೊಂಡಿದ್ದ ಇಬ್ಬರು ಖದೀಮರು ಹಾಗೂ ದರೋಡೆಗೆ ಬಳಸಿದ್ದ ಇನೋವಾ … Continue reading *7.11 ಕೋಟಿ ಹಣ ದರೋಡೆ: ಇಬ್ಬರು ಖದೀಮರನ್ನು ವಶಕ್ಕೆ ಪಡೆದ ಪೊಲೀಸರು*