*ಅಂಗಳದಲ್ಲಿದ್ದ ಗೇಟ್ ಮುರಿದು ಬಿದ್ದು ಬಾಲಕಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಮನೆಯಂಗದಲ್ಲಿದ್ದ ಗೇಟ್ ಮುರಿದುಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಇಲ್ಲಿನ ವಾಜರಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. 7 ವರ್ಷದ ಬಾಲಕಿ ಯಲ್ಲಮ್ಮ ಮೃತ ದುರ್ದೈವಿ. ರಾಯಚೂರು ಮೂಲದ ಮಂಕಪ್ಪ-ಮಲ್ಲಮ್ಮ ದಂಪತಿಯ ಪುತ್ರಿ. ಮನೆಯಂಗದಲ್ಲಿದ್ದ ಗೇಟ್ ಹತ್ತಿ ಆಟವಾಡುತ್ತಿದ್ದಾಗ ಗೇಟ್ ಏಕಾಏಕಿ ಮುರಿದು ಬಿದ್ದಿದೆ. ಗೇಟ್ ಅಡಿಗೆ ಸಿಲುಕಿದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಬೆನ್ನುಹುರಿ ಶಸ್ತ್ರಚಿಕಿತ್ಸೆ ವೈದ್ಯರ ಭೇಟಿ; ಸದಪಯೋಗ ಪಡೆದುಕೊಳ್ಳುವಂತೆ ಮನವಿ*