*ಪಾದಯಾತ್ರೆಗೆ ತೆರಳಿದ ಭಕ್ತರ ಮೇಲೆ ಹರಿದ ಖಾಸಗಿ ಬಸ್: ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ: ಹುಲಿಯಮ್ಮ ದೇವಸ್ಥಾನಕ್ಕೆ ಪಾದಯಾತ್ರೆಗೆ ತೆರಳಿದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಬಸ್ ಹರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ.‌ ಇಂದು ಬೆಳ್ಳಂ ಬೆಳಗ್ಗೆ ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದ್ದು, ವೇಗವಾಗಿ ಬಂದ ಖಾಸಗಿ ಬಸ್ ಎಲ್ಲರ ಮೇಲೂ ಹರಿದಿದ್ದು ಪರಿಣಾಮ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಅನ್ನಪೂರ್ಣ (40), ಪ್ರಕಾಶ್ (25), ಶರಣಪ್ಪ (19 ಎಂದು … Continue reading *ಪಾದಯಾತ್ರೆಗೆ ತೆರಳಿದ ಭಕ್ತರ ಮೇಲೆ ಹರಿದ ಖಾಸಗಿ ಬಸ್: ಮೂವರು ಸಾವು*