*ಕಾಸರಗೋಡು ಬಳಿ ಅಪಘಾತ: ಒಂದೆ ಕುಟುಂಬದ ಮೂವರ ಸಾವು*

ಪ್ರಗತಿವಾಹಿನಿ ಸುದ್ದಿ : ಕೇರಳದ ಕಾಸರಗೋಡು ಸಮೀಪ ರಣಭೀಕರ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಮೂವರು ಸಾವನಪ್ಪಿದ್ದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ವಾಮಂಜೂರು ಚೆಕ್ ಪೋಸ್ಟ್ ಬಳಿ ದುರ್ಘಟನೆ ನಡೆದಿದೆ.Home add -Advt ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿಯಾಗಿದೆ. ಮೃತಪಟ್ಟವರನ್ನು ಜನಾರ್ದನ, ವರುಣ್ ಹಾಗೂ ಕಿಶನ್ ಎಂದು ಗುರುತಿಸಲಾಗಿದೆ. ರತ್ನಾ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. … Continue reading *ಕಾಸರಗೋಡು ಬಳಿ ಅಪಘಾತ: ಒಂದೆ ಕುಟುಂಬದ ಮೂವರ ಸಾವು*