*ವಿಶ್ವವಿದ್ಯಾಲಯದ ಬೋಧಕನನ್ನೇ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ: ವಿಶ್ವವಿದ್ಯಾಲಯದ ಬೋಧಕನನ್ನೇ ಮುಸುಕುಧಾರಿ ದುಷ್ಕರ್ಮಿಗಳು ಗುಂಡಿಟ್ತು ಹತ್ಯೆಗೈದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವಾಕಿಂಗ್ ಹೋಗುತ್ತಿದ್ದ ಬೋಧಕನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ರಾವ್ ಡ್ಯಾನಿಷ್ ಅಲಿ ಹತ್ಯೆಯಾದ ಬೋಧಕ. ಗುಂಡು ಹಾರಿಸುವ ಮೊದಲು ಬಂದೂಕುಧಾರಿಯೊಬ್ಬ ನಿನಗೆ ನಾನ್ಯಾರು ಎಂದು ಗೊತ್ತಿಲ್ಲ, ಈಗ ತಿಳಿಯುತ್ತೆ ಎಂದು ಹೇಳಿ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದರು. ಗುಂಡಿನ ದಾಳಿ … Continue reading *ವಿಶ್ವವಿದ್ಯಾಲಯದ ಬೋಧಕನನ್ನೇ ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು*