ಅಂಬೋಲಿ ಫಾಲ್ಸ್ ನಲ್ಲಿ ದುರಂತ: 400 ಅಡಿ ಪ್ರಪಾತಕ್ಕೆ ಬಿದ್ದು ಪ್ರವಾಸಿಗ ಸಾವು

ಪ್ರಗತಿವಾಹಿನಿ ಸುದ್ದಿ: ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಪ್ರಸಿದ್ಧ ಅಂಬೋಲಿ ಫಾಲ್ಸ್ ನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಡಾ.ಅಯೂಬ್ ಸಯ್ಯದ್ (45) ಮೃತ ದುರ್ದೈವಿ. ಮಂಗಳವಾರ ಅಂಬೋಲಿಗೆ ಬಂದಿದ್ದ ವೇಳೆ ಮಹಾದೇವಗಢದಲ್ಲಿ 400 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಮಹಾದೇವಗಢ ಪಾಯಿಂಟ್ ನಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ಬೇಲಿಯನ್ನು ದಾಟಿ ಮುಂದಕ್ಕೆ ಹೋಗಿದ್ದರು. ಈ ವೇಳೆ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ರಕ್ಷಣಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. … Continue reading ಅಂಬೋಲಿ ಫಾಲ್ಸ್ ನಲ್ಲಿ ದುರಂತ: 400 ಅಡಿ ಪ್ರಪಾತಕ್ಕೆ ಬಿದ್ದು ಪ್ರವಾಸಿಗ ಸಾವು