*BREAKING: ಪಟಾಕಿ ತಯಾರಿಸುವಾಗ ಭೀಕರ ಸ್ಫೋಟ: ಬೆಂಕಿ ಅವಘಡದಲ್ಲಿ 6 ಜನರು ಸಜೀವದಹನ*

ಪ್ರಗತಿವಾಹಿನಿ ಸುದ್ದಿ: ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದ್ದು, 6 ಜನರು ಸಜೀವದಹನವಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಪಟಾಕಿ ತಯಾರಿಸುತ್ತಿದಾಗ ಸ್ಫೋಟ ಸಂಭವಿಸಿದ್ದು. ಸ್ಫೋಟದ ವೇಳೆ ಬೆಂಕಿ ಹೊತ್ತಿಕೊಂಡಿದೆ. ಇಡೀ ಘಟಕ ಹೊತ್ತಿ ಉರಿದಿದ್ದು, 6 ಜನರು ಸಜೀವದಹನವಾಗಿದ್ದಾರೆ. 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. … Continue reading *BREAKING: ಪಟಾಕಿ ತಯಾರಿಸುವಾಗ ಭೀಕರ ಸ್ಫೋಟ: ಬೆಂಕಿ ಅವಘಡದಲ್ಲಿ 6 ಜನರು ಸಜೀವದಹನ*