*ಬಿಮ್ಸ್ ಹಿರಿಮೆಗೆ ಮತ್ತೊಂದು ಗರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ಬಿಮ್ಸ್‌ ಸಂಸ್ಥೆಯು ಇತ್ತೀಚೆಗೆ ಇಂಡಿಯಾ ಟುಡೇ ಸಂಸ್ಥೆಯು ನಡೆಸಿದ ʼಬೆಸ್ಟ್‌ ಮೆಡಿಕಲ್‌ ಕಾಲೇಜ್‌ ಆಫ್‌ ಇಂಡಿಯಾʼಸಮೀಕ್ಷೆಯಲ್ಲಿ ದೇಶದ 884 ವೈದ್ಯಕೀಯ ಕಾಲೇಜುಗಳ ಪೈಕಿ 32ನೇ ರ್ಯಾಂಕ್‌ ಪಡೆದುಕೊಂಡಿದೆ. ಕಳೆದ ವರ್ಷವೂ 33 ನೇ ರ್ಯಾಂಕ್‌ ಪಡೆದುಕೊಂಡಿದ್ದ ಬಿಮ್ಸ್‌ ಈ ವರ್ಷ ಒಂದು ಸ್ಥಾನವನ್ನು ಮೇಲೇರಿ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಸಂಸ್ಥೆಯ ಹೆಗ್ಗಳಿಕೆಯನ್ನು ಇಮ್ಮಡಿಗೊಳಿಸಿದೆ. ಸಂಸ್ಥೆಯ ಅಗತ್ಯ ಸೌಲಭ್ಯ, ಸೇವಾಯೋಗ್ಯ ಸ್ಥಳ, ವೈಜ್ಞಾನಿಕ … Continue reading *ಬಿಮ್ಸ್ ಹಿರಿಮೆಗೆ ಮತ್ತೊಂದು ಗರಿ*