*ಪ್ರತಿಭಟನೆಯ ನಡುವೆ ಬರಸಿಡಿಲು*: *ಆಶಾ ಕಾರ್ಯಕರ್ತೆಯ ಮಗನ ದುರಂತ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯೊಬ್ಬರಿಗೆ ವಿಧಿ ಬರಸಿಡಿಲಿನಂತೆ ಎರಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ತಾಯಿಗೆ ಮಗನ ಸಾವಿನ ಸುದ್ದಿ ತಲುಪಿದೆ. 21 ವರ್ಷದ ಮಗನನ್ನು ಕಳೆದುಕೊಂಡ ತಾಯಿಯ ದುಃಖ ಹೇಳತೀರದಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಊರಿಗೆ ಧಾವಿಸಿದ ತಾಯಿಯ ಕುಟುಂಬದಲ್ಲಿ ಇದೀಗ ಆಕ್ರಂದನ ಮುಗಿಲು ಮುಟ್ಟಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ರೂಪ ಅವರ ಪುತ್ರ ಸುಜಯ್ (21) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬುಧವಾರ … Continue reading *ಪ್ರತಿಭಟನೆಯ ನಡುವೆ ಬರಸಿಡಿಲು*: *ಆಶಾ ಕಾರ್ಯಕರ್ತೆಯ ಮಗನ ದುರಂತ ಅಂತ್ಯ*