*ಪತಿ ಆತ್ಮಹತ್ಯೆ ಕಂಡು ಪತ್ನಿಯೂ ಪ್ರಾಣಬಿಟ್ಟಳೇ?*: *ದಂಪತಿ ಸಾವಿನ ಸುತ್ತ ಅನುಮಾನದ ಹುತ್ತ*

ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹದ ಹಿನ್ನೆಲೆ ಪತಿ ಮತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ. ದಂಪತಿಯ ಸಾವಿನಿಂದ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದು ಕುಟುಂಬಸ್ಥರಲ್ಲಿ ಆಕ್ರಂದನ ಮಡುಗಟ್ಟಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಅಪ್ಪಾಶಿ ಶಿವಪ್ಪ ನಡುವಿನಮನಿ (35) ಮತ್ತು ರಾಜೇಶ್ವರಿ ನಡುವಿನಮನಿ (30) ಮೃತ ದಂಪತಿ. ಮೊದಲು ಅಪ್ಪಾಶಿ ಶಿವಪ್ಪ ಮನೆಯ ಹೊರಗಿರುವ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಪತಿಯ ಆತ್ಮಹತ್ಯೆಯನ್ನು ಕಂಡ ಪತ್ನಿ … Continue reading *ಪತಿ ಆತ್ಮಹತ್ಯೆ ಕಂಡು ಪತ್ನಿಯೂ ಪ್ರಾಣಬಿಟ್ಟಳೇ?*: *ದಂಪತಿ ಸಾವಿನ ಸುತ್ತ ಅನುಮಾನದ ಹುತ್ತ*