*ಜಮೀನಿಗೆ ಹೋಗಿದ್ದಾಗ ದುರಂತ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಜಮೀನಿನ ಬಳಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘೋರ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಈ ವೇಳೆ ಮಕ್ಕಳು ಕೂಡ ಜಮೀನಿಗೆ ಹೋಗಿದ್ದರು. ಕೃಷಿ ಹೊಂಡದ ಬಳಿ ಬಂದಿದ್ದ ಬಾಲಕರು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಮಹಾಂಕಾಳಿ (12) ಹಾಗೂ ಶಿವರಾಜ್ (9) ಮೃತ ಮಕ್ಕಳು. ತೆಕ್ಕಲಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Home add … Continue reading *ಜಮೀನಿಗೆ ಹೋಗಿದ್ದಾಗ ದುರಂತ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ*
Copy and paste this URL into your WordPress site to embed
Copy and paste this code into your site to embed