*ಬಲೂನ್ ಊದುವಾಗ ಅನಾಹುತ: ಗಂಟಲಲ್ಲಿ ಸಿಲುಕಿ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಆಟವಾಡುತ್ತಿದ್ದ ಬಾಲಕ ಬಲೂನ್ ಊದುವಾಗ ಅನಾಹುತ ಸಂಭವಿಸಿ ಗಂಟಲಲ್ಲಿ ಬಲೂನ್ ಸಿಲುಕಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪದಲ್ಲಿ ನಡೆದಿದೆ. 13 ವರ್ಷದ ನವೀನ್ ನಾರಾಯಣ ಬೆಳಗಾಂವ್ಕರ್ ಮೃತ ಬಾಲಕ. ಬಲೂನ್ ಊದುವಾಗ ಉಸಿರು ಎಳೆದುಕೊಳ್ಳುತ್ತಿದ್ದಂತೆ ಬಾಲಕನ ಗಂಟಲಲ್ಲಿ ಬಲೂನ್ ಸಿಲುಕಿಕೊಂಡಿದೆ. ಈ ವೇಳೆ ಬಾಲಕ ಉಸಿರುಗಟ್ಟಿ ಒದ್ದಾಡುತ್ತಿದ್ದಾಗ ಮನೆಯವರು ಗಂಟಲಲ್ಲಿ ಸಿಲುಕಿದ್ದ ಬಲೂನು ತೆಗೆಯಲು ಯತ್ನಿಸಿದ್ದಾರೆ ಆದರೆ ಸಾಧ್ಯವಾಗಿಲ್ಲ. ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದಾನೆ. … Continue reading *ಬಲೂನ್ ಊದುವಾಗ ಅನಾಹುತ: ಗಂಟಲಲ್ಲಿ ಸಿಲುಕಿ ಬಾಲಕ ಸಾವು*