*ಹೊಲಗಳಲ್ಲೇ ಕರಡಿಗಳ ರಾಜಾರೋಷದ ಓಡಾಟ*: *ರೈತರಲ್ಲಿ ಹೆಚ್ಚಿದ ಆತಂಕ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಗ್ರಾಮಗಳ ಸುತ್ತಮುತ್ತ ಕರಡಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಹೊಲಗಳಿಗೆ ತೆರಳುವುದಕ್ಕೂ ಜನರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಲಗಳಲ್ಲಿ ಕರಡಿಗಳು ಓಡಾಡುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಡಿಕೆ ತೋಟಗಳಿಗೂ ಕರಡಿಗಳಿಂದ ಹಾನಿಯಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು, ಕುಳೇನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹೊಲಗದ್ದೆಗಳಲ್ಲಿ ಕರಡಿಗಳ ಸಂಚಾರ ನಿರಂತರವಾಗಿ ಕಂಡುಬರುತ್ತಿದೆ. ಮುಂಜಾನೆ ಹೊಲಗಳಿಗೆ ತೆರಳಿದ್ದ ರೈತರಿಗೆ ಕರಡಿಗಳು ಎದುರಾಗಿದ್ದು, ಈ ದೃಶ್ಯಗಳನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕರಡಿಗಳು ಅಡಿಕೆ … Continue reading *ಹೊಲಗಳಲ್ಲೇ ಕರಡಿಗಳ ರಾಜಾರೋಷದ ಓಡಾಟ*: *ರೈತರಲ್ಲಿ ಹೆಚ್ಚಿದ ಆತಂಕ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ*