Advertisement -Home Add
Crease wise (28th Jan)
KLE1099 Add

ಖಾನಾಪುರದಲ್ಲಿ ದಿಢೀರ್ ದಾಳಿ; ಪ್ಲಾಸ್ಟಿಕ್ ವಶ

ದಂಡ ಕಟ್ಟದಿದ್ದರೆ ಲೈಸನ್ಸ ರದ್ದು:  ಎ.ಸಿ. ಅಶೋಕ ತೇಲಿ

ದಂಡ ಕಟ್ಟದಿದ್ದರೆ ಲೈಸನ್ಸ ರದ್ದು:  ಎ.ಸಿ. ಅಶೋಕ

 

ಪ್ರಗತಿವಾಹಿನಿ ಸುದ್ದಿ, ಖಾನಾಪುರ:  ನಗರದ  ವಿವಿಧ  ಟ್ರೇಡರ್ಸಗಳ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಮಾಲಿನ್ಯಕ್ಕೆ ಕಾರಣವಾಗುವ   ಸುಮಾರು ಒಂದು ಕ್ವಿಂಟಾಲಗೂ ಅಧಿಕ  ಪ್ಲಾಸ್ಟಿಕ್ ಬ್ಯಾಗ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೂಡಲೇ ಸಂಬಂಧಿಸಿದ ಅಂಗಡಿಯವರು ದಂಡ ಕಟ್ಟಿ; ಇಲ್ಲವಾದರೆ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪರಿಸರ ಮಾಲಿನ್ಯ ತಡೆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್‍ಗಳ ಬಳಕೆ, ಮಾರಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ್ ತೇಲಿ ಖಾನಾಪುರ ವ್ಯಾಪ್ತಿಯ ಕಿರಾಣಿ ಅಂಗಡಿ, ಬೇಕರಿ ಅಂಗಡಿ ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ವಿವೇಕ ಬನ್ನೆ ಮುಖ್ಯ ಚೀಫ್ ಆಫೀಸರ್, ಎಸ್.ಆರ್.ಪಾಟೀಲ, ಪ್ರೇಮಾನಂದ ನಾಯಿಕ ದಾಳಿಯಲ್ಲಿ ಪಾಲ್ಗೊಂಡಿದ್ದರು. ದಾಳಿ ನಡೆಸಿದ ಅಂಗಡಿಗಳಿಂದ ದಂಡವನ್ನು ಸಹ ವಸೂಲಿ ಮಾಡಲಾಗಿದೆ.
 ತಿಂಗಳ ಹಿಂದೆಯೂ ಖಾನಾಪುರ ವ್ಯಾಪ್ತಿಯ ಕಿರಾಣಿ ಅಂಗಡಿ, ಬೇಕರಿ ಅಂಗಡಿ ಸೇರಿದಂತೆ ಇನ್ನಿತರ ಅಂಗಡಿಗಳಿಂದ ಸುಮಾರು ೪೦,೦೦೦ ರೂ.ಗಳಷ್ಟು ದಂಡ ವಸೂಲಿ ಮಾಡಿದ್ದು ಕೂಡ ಉಲ್ಲೇಖನೀಯ.