Yoga add Final 1
KLE1099 Add

ಬೆಳಗಾವಿ ನಗರ ಮಧ್ಯೆ ಅಪಘಾತ: ಶಿಕ್ಷಕಿ ಬಲಿ; ಅನಾಥರಾದ ಇಬ್ಬರು ಮಕ್ಕಳು

ಸ್ಕೂಟಿಯಲ್ಲಿ ಬರುತ್ತಿದ್ದಾಗ ಟ್ಯಾಂಕರ್ ಡಿಕ್ಕಿ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಇಲ್ಲಿಯ ಕೊಲ್ಲಾಪುರ ವೃತ್ತದ ಬಳಿ ಶನಿವಾರ ಸಂಜೆ ಸಂಭವಿಸಿದ ಭೀಕರ ಅಪಘಾತಕ್ಕೆ ಮಹಿಳೆಯೋರ್ವಳು ಬಲಿಯಾಗಿದ್ದಾರೆ. ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ರೇಣುಕಾ ಬಾತಖಾಂಡೆ (31) ಮೃತರು.

ರೇಣುಕಾ ಸ್ಕೂಟಿಯಲ್ಲಿ ಬರುತ್ತಿದ್ದಾಗ ಟ್ಯಾಂಕರ್ ಡಿಕ್ಕಿಯಾಗಿದೆ. ಇದರಿಂದ ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಮಹಿಳೆಗೆ ಇಬ್ಬರು ಮಕ್ಕಳಿದ್ದು, ಪತಿ ಕೂಡ ಕೆಲವು ತಿಂಗಳ ಹಿಂದೆ ಸಾವಿಗೀಡಾಗಿದ್ದರಿಂದ ಮಕ್ಕಳು ಅನಾಥರಾಗಿದ್ದಾರೆ.

ನಗರದಲ್ಲಿ ವಾಹನಗಱ ವೇಗಕ್ಕೆ ಮಿತಿ ಹಾಕುವ ಮತ್ತು ಭಾರೀ ವಾಹನಗಳಿಗೆ ತಡೆಯೊಡ್ಡಬೇಕೆನ್ನುವ ಕೂಗು ಹಾಗೆಯೇ ಉಳಿದುಕೊಂಡಿದೆ. ಅಪಘಾತ ಸಂಭವಿಸಿದಾಗಲೊಮ್ಮೆ ನಿಯಮ ಜಾರಿಾಗುತ್ತದೆ. ನಂತರ ಪುನಃ ಹೇಳಕೇಳುವವರಿರುವುದಿಲ್ಲ. ದಿನದ 24 ಗಂಟೆಯೂ ಬೆಳಗಾವಿ ನಗರದಲ್ಲಿ ಭಾರಿ ವಾಹನಗಳ ಓಡಾಟ ಎಗ್ಗಿಲ್ಲದೆ ಸಾಗುತ್ತದೆ.

Shocking News: ಮೂಡಲಗಿ ಹಳ್ಳದಲ್ಲಿ ಸಿಕ್ಕಿದ ಭ್ರೂಣಗಳ ಪೋಸ್ಟ್ ಮಾರ್ಟಂ ವರದಿ ಬಹಿರಂಗ

Home add- Bottom