Athani Takkennavar
Beereshwara13
GIT add4

ಕೇಂದ್ರ ಸಚಿವರು ಊಟ ಮಾಡುತ್ತಿದ್ದ ಮನೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭಾವಚಿತ್ರದ ಕ್ಯಾಲೆಂಡರ್ ಕಂಡು ತಬ್ಬಿಬ್ಬಾದ ಬಿಜೆಪಿಗರು

ಮಧ್ಯಾಹ್ನದ ಊಟೋಪಚಾರದಲ್ಲಿ ಮುಜುಗರ ತಂದ ಕ್ಯಾಲೆಂಡರ್ !

KLE1099 Add

ಪ್ರಗತಿವಾಹಿನಿ ನ್ಯೂಸ್, ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 8  ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ಕೇಂದ್ರ ಸಚಿವ ಸೋಮಪ್ರಕಾಶ  ಅವರಿಗೆ ಊಟಕ್ಕೆಂದು ನಿಗದಿಯಾಗಿದ್ದ ದಲಿತ ಸಮುದಾಯದ ಮನೆಯೊಂದರಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಫೋಟೊ ಇರುವ ಕ್ಯಾಲೆಂಡರ್ ಬಿಜೆಪಿಗರನ್ನು ತಬ್ಬಿಬ್ಬುಗೊಳಿಸಿತು.

ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಕೇಂದ್ರ ಸಚಿವ ಸೋಮಪ್ರಕಾಶ ಅವರ ಜೊತೆ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಳ ಅಂಗಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಇತರ ಬಿಜೆಪಿ ಮುಖಂಡರು ದಲಿತರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಹಿಂಡಲಗಾದ ಬಾಯವ್ವಾ ಮಾಸ್ತೆ ಎಂಬ ದಲಿತ ಮಹಿಳೆಯೊಬ್ಬರ ಮನೆ ನಿಗದಿಪಡಿಸಲಾಗಿತ್ತು.

ನಿಗದಿತ ಕಾರ್ಯಕ್ರಮದಂತೆ ಸಚಿವರು, ಇತರ ಮುಖಂಡರು ಬಾಯವ್ವಾ ಅವರ  ಮನೆಗೆ ತೆರಳಿ ಊಟ ಮಾಡುತ್ತಿದ್ದಾಗ ಮನೆಯ ಗೋಡೆಗೆ ನೇತುಹಾಕಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಫೋಟೊಗಳು ಇರುವ ಕ್ಯಾಲೆಂಡರ್  ಒಂದು ಮಾಧ್ಯಮದವರ ಕಣ್ಣಿಗೆ ಗೋಚರಿಸಿತು.

ಮಾಧ್ಯಮದವರು ಕ್ಯಾಲೆಂಡರ್ ಚಿತ್ರೀಕರಣ  ಮಾಡಿಕೊಳ್ಳಲು ಮುಂದಾಗುತ್ತಿದ್ದಂತೆ ಇದನ್ನು ಗಮನಿಸಿದ ಬಿಜೆಪಿ ಮುಖಂಡರು ಒಂದು ಕ್ಷಣ ತಬ್ಬಿಬ್ಬಾದರು.

ತೀವ್ರ ಮುಜುಗರಕ್ಕೀಡಾದ ಬಿಜೆಪಿ ಮುಖಂಡರ ಚಲನವಲನಗಳು ಒಂದೇ ಸಮನೆ ತೀವ್ರಗೊಂಡು ಸಚಿವರ ಗಮನಕ್ಕೆ ಬರುವ ಮುನ್ನವೇ ಕ್ಯಾಲೆಂಡರನ್ನು ಗೋಡೆಯಿಂದ ತೆರವುಗೊಳಿಸಲಾಯಿತು.

ಒಟ್ಟಿನಲ್ಲಿ ದಲಿತರ ಮನೆಯಲ್ಲಿ ಊಟ ಮಾಡುವ ಮೂಲಕ ಪೋಸ್ ನೀಡಲು ಬಹು ಉತ್ಸುಕತೆಯಿಂದ ಹಾಕಿಕೊಂಡಿದ್ದ ಬಿಜೆಪಿಗರ ಯೋಜನೆ ಬರಿಯ ಕ್ಯಾಲೆಂಡರ್ ಒಂದರಿಂದಾಗಿ ಬಣ್ಣಗೇಡಾಯಿತು.

ಹಾಲಗಿಮರ್ಡಿ ಗ್ರಾಮದಲ್ಲಿ ಹೆಚ್ಚುವರಿ ಶಾಲಾ ಕೊಠಡಿ ಉದ್ಘಾಟನೆ, ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

Nivedita Navalgund
You cannot copy content of this page