ಕೇಂದ್ರ ಸಚಿವರು ಊಟ ಮಾಡುತ್ತಿದ್ದ ಮನೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭಾವಚಿತ್ರದ ಕ್ಯಾಲೆಂಡರ್ ಕಂಡು ತಬ್ಬಿಬ್ಬಾದ ಬಿಜೆಪಿಗರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 8  ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ಕೇಂದ್ರ ಸಚಿವ ಸೋಮಪ್ರಕಾಶ  ಅವರಿಗೆ ಊಟಕ್ಕೆಂದು ನಿಗದಿಯಾಗಿದ್ದ ದಲಿತ ಸಮುದಾಯದ ಮನೆಯೊಂದರಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಫೋಟೊ ಇರುವ ಕ್ಯಾಲೆಂಡರ್ ಬಿಜೆಪಿಗರನ್ನು ತಬ್ಬಿಬ್ಬುಗೊಳಿಸಿತು.