Yoga add Final 1
KLE1099 Add

ಹೇಗೆ ಇದ್ದರೂ ಇದು‌‌ ಕಾನೂನು ಬಾಹಿರ, ಸಮಗ್ರ ತನಿಖೆ – ಜಿಲ್ಲಾಧಿಕಾರಿ ನಿತೇಶ್ ಪಾಟೀಲ

However, this is an illegal, comprehensive investigation - Deputy Commissioner Nitesh Patil

GIT Add 3
Beereshwara add 12
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿರುವ ಭ್ರೂಣಗಳು ಗಂಡು ಭ್ರೂಣಗಳಾಗಿರುವುದರಿಂದ ಹೆಣ್ಣು ಭ್ರೂಣ ಹತ್ಯೆ ಅಲ್ಲ ಎಂಬುದು ಗೊತ್ತಾಗುತ್ತದೆ.
ಆರು‌ ಗಂಡು ಭ್ರೂಣಗಳು ಸ್ಥೂಲ‌ ಜನ್ಮಜಾತ ಬೆಳವಣಿಗೆಯ ವೈಪರೀತ್ಯ ಹೊಂದಿರುವುದು ಎಂಬುದು ವೈದ್ಯಕೀಯ ತಜ್ಞರ ವರದಿಯಲ್ಲಿ ತಿಳಿಸಲಾಗಿದೆ.
ಈ ಭ್ರೂಣಗಳು ಫಾರ್ಮಾಲಿನ್ ಬಳಸಿ ವಸ್ತು ಸಂಗ್ರಹಾಲಯದಲ್ಲಿ ಶೇಖರಿಸಿಡಲ್ಪಡುವ ಮಾದರಿಯದ್ದಾಗಿವೆ ಎಂಬುದು ವರದಿಯಲ್ಲಿ ಹೇಳಲಾಗಿದೆ.
ಆದಾಗ್ಯೂ ಭ್ರೂಣಗಳು ಹೇಗೆ ಸಂಗ್ರಹಿಸಲಾಯಿತು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಲಾಗುವುದು.
ಹೇಗೆ ಇದ್ದರೂ ಇದು‌‌ ಕಾನೂನು ಬಾಹಿರ ಆಗಿರುವುದರಿಂದ ಆ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ 185 ಕೇಂದ್ರಗಳ ಪರಿಶೀಲನೆ:
ಆರೋಗ್ಯ ಇಲಾಖೆಯ ತಂಡಗಳು ಇಂದು ಜಿಲ್ಲೆಯಾದ್ಯಂತ 185 ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರತಿ‌ ಕೇಂದ್ರದಲ್ಲಿ ಸರಕಾರದ ಮಾರ್ಗಸೂಚಿ ಪಾಲಿಸುತ್ತಿರುವ ಕುರಿತು ಪರಿಶೀಲಿಸಲಾಗಿದೆ.
ಬೆಳಗಾವಿಯಲ್ಲಿ 64, ಅಥಣಿ-24, ಸವದತ್ತಿ-8, ರಾಯಬಾಗ-8, ಚಿಕ್ಕೋಡಿ-18, ಖಾನಾಪುರ-8, ರಾಮದುರ್ಗ-6, ಗೋಕಾಕ-40, ಬೈಲಹೊಂಗಲ-6 ಹಾಗೂ ಹುಕ್ಕೇರಿಯ 3 ಕೇಂದ್ರಗಳನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
https://pragativahini.com/latest/7-new-born-baby-dead-body-found-casemudalagid-h-o-clarification/
Home add- Bottom