Athani Takkennavar
Beereshwara13
GIT add4

ಡಾ. ಎಂ. ಜಿ. ಮುಳೆ ಅವರಿಗೆ ಧನ್ಯವಾದ ಹೇಳಿದ ಕಿರಣ ಜಾಧವ್

kiran jadhav thanked dr.m.g. mule

KLE1099 Add

 

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:  ಬಿಜೆಪಿಯ ಹಿಂದುಳಿದ ವರ್ಗಗಳ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಮರಾಠ ಸಮಾಜದ ಮುಖಂಡ ಕಿರಣ ಜಾಧವ್ ಅವರು, ಕರ್ನಾಟಕ ಮರಾಠ ಸಮಾಜ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಎಂ. ಜಿ. ಮುಳೆ ಅವರನ್ನು ಭೇಟಿ ಮಾಡಿ, ಮರಾಠ ಸಮಾಜದ ಅಭಿವೃದ್ಧಿಗಾಗಿ ಶಹಾಜಿ ರಾಜೇ ಯೋಜನೆಯನ್ನು ಅನುಷ್ಠಾನಗೊಳಿಸಿದ ಕುರಿತು ಧನ್ಯವಾದ ಸಲ್ಲಿಸಿದರು.

ಈ ಯೋಜನೆ ಮರಾಠ ಸಮಾಜದವರು ಉದ್ಯಮಗಳನ್ನು ಕೈಗೊಳ್ಳಲು ಹೊರತಂದಿರುವ ಮೊದಲ ಯೋಜನೆಯಾಗಿದೆ ಮತ್ತು ಬಹಳಷ್ಟು ಅರ್ಜಿಗಳು ಸಹ ಬರುತ್ತಿವೆ ಎಂದು ಶ್ಲಾಘಸಿದರು.

ಈ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿಗಾಗಿ ಹೊಸ ಯೋಜನೆಗಳ ಕುರಿತು, ಮರಾಠ ಸಮಾಜವನ್ನು ಸ್ವಾವಲಂಭಿಯನ್ನಾಗಿ ಮಾಡುವ ಬಗ್ಗೆ, ಮರಾಠ ಸಮಾಜದ ಯುವಕರ ಶಿಕ್ಷಣ, ಔಧ್ಯಮಿಕ ಕ್ಷೇತ್ರಕ್ಕೆ ಯುವ ಜನತೆಗೆ ಪ್ರೋತ್ಸಾಹ ನೀಡುವ ಬಗ್ಗೆ ಚರ್ಚಿಸಲಾಯಿತು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಮಾಜದ ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಕರ್ನಾಟಕ ಸೇರಿ ಎನ್ ಐಎ ಬಂಧಿಸಿದವರ ಪಟ್ಟಿ ಬಿಡುಗಡೆ;

ಕರ್ನಾಟಕ ಸೇರಿ ಎನ್ ಐಎ ಬಂಧಿಸಿದವರ ಪಟ್ಟಿ ಬಿಡುಗಡೆ;

Nivedita Navalgund
You cannot copy content of this page