Yoga add Final 1
KLE1099 Add

Police Warning : ಬೆಳಗಾವಿ ನಾಗರಿಕರಿಗೆ ಪೊಲೀಸರಿಂದ ತುರ್ತು ಎಚ್ಚರಿಕೆ

Police Alert: Urgent warning from the police to the citizens of Belgaum

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದಿನಾಂಕ, 05/08/2022 ರಂದು ಮಧ್ಯಾಹ್ನ ಸಮಯದಲ್ಲಿ ಬೆಳಗಾವಿಯ ಜಾಧವ ನಗರದಲ್ಲಿ ಚಿರತೆಯೊಂದು ಸಾರ್ವಜನಿಕರಿಗೆ ಕಾಣಿಸಿಕೊಂಡಿದ್ದು, ಆ ಭಾಗದಲ್ಲಿಯ ಕೆಲವು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗಿ ಅಲ್ಲಿ ಚಿರತೆ ದಾಟಿ ಹೋಗಿದ್ದು ಕಂಡು ಬಂದಿದೆ.

ಕಾರಣ ಬೆಳಗಾವಿ ನಗರದ ಸಾರ್ವಜನಿಕರು ಈ ದಿನ ರಾತ್ರಿ ಹೊತ್ತಲ್ಲಿ ವಿನಾಕಾರಣ ತಿರುಗಾಡುವುದು, ಹೊರಗಡೆ ಕೂಡುವುದು ಅಥವಾ ರಾತ್ರಿ ಹೊತ್ತಿನಲ್ಲಿ ಮನೆಯ ಹೊರಗಡೆ ಮಕ್ಕಳು ಆಟವಾಡುವುದನ್ನು ಮಾಡಬಾರದು.

ಇದರೊಂದಿಗೆ ನಾಳೆ ಬೆಳಗಿನ ಜಾವ ಈ ಭಾಗದಲ್ಲಿ ಹಾಗೂ ಬಾಕ್ಸೈಟ್  ರಸ್ತೆಯಲ್ಲಿ ಮುಂಜಾನೆ ವಾಯು ವಿಹಾರ ಹಾಗೂ ವ್ಯಾಯಾಮಕ್ಕೆಂದು ತೆರಳುವವರು ಸಹ ಜಾಗರೂಕರಾಗಿರಬೇಕೆಂದು ಮತ್ತು ನಿಮ್ಮ ಮಕ್ಕಳ ಕಡೆಗೆ ಹೆಚ್ಚಿನ ನಿಗಾವಹಿಸಬೇಕೆಂದು ತಿಳಿಸಲಾಗಿದೆ.

 

ನಗರದಲ್ಲಿ ಆಗಮಿಸಿದ  ಚಿರತೆ ಮತ್ತೊಮ್ಮೆ ಎಲ್ಲಿಯಾದರು ಕಾಣಿಸಿಕೊಂಡಲ್ಲಿ ಅಥವಾ ನಿಮ್ಮ ಮನೆ, ಅಂಗಡಿಗಳಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಅದರ ಚಲನ ವಲನ ದಾಖಲಾಗಿದ್ದಲ್ಲಿ, ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ / 112 ಕ್ಕೆ ಅಥವಾ ಅರಣ್ಯ ಅಧಿಕಾರಿಗಳಗೆ ತಕ್ಷಣ ಕರೆ ಮಾಡಿ ಮಾಹಿತಿ ನೀಡುವಂತೆ ಈ ಮೂಲಕ ಸಾರ್ವಜನಿಕರಲ್ಲಿ ಕೋರಲಾಗಿದೆ.

 

ಮಗನ ಮೇಲೆ ಚಿರತೆ ದಾಳಿ; ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ತಾಯಿ

ಬೆಳಗಾವಿ ನಗರದಲ್ಲಿ ಚಿರತೆ ದಾಳಿ; ಓರ್ವನಿಗೆ ಗಾಯ; ಬೆಚ್ಚಿ ಬಿದ್ದ ಜನ

 

ಬೆಳಗಾವಿ: ರೆಡ್ ಹ್ಯಾಂಡ್ ಆಗಿ ACB ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

Home add- Bottom