Advertisement -Home Add

ಬೆಳಗಾವಿ ಗ್ರಾಮೀಣ ಕ್ಷೇತ್ರದ 20 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್

ಸಿದ್ಧತೆಯಲ್ಲಿ ತೊಡಗಿರುವ  ಜ್ಞಾನಸುಧಾ ಇನ್ನೋವೇಟಿವ್ ಸೊಲ್ಯೂಷನ್ಸ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಚನ್ನರಾಜ ಹಟ್ಟಿಹೊಳಿ

 ಜ್ಞಾನಸುಧಾ ಇನ್ನೋವೇಟಿವ್ ಸೊಲ್ಯೂಷನ್ಸ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಚನ್ನರಾಜ ಹಟ್ಟಿಹೊಳಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಇಪ್ಪತ್ತು ಸರ್ಕಾರಿ ಶಾಲಾ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ಶಾಲಾ ಕೊಠಡಿಗಳನ್ನಾಗಿ ಪರಿವರ್ತಿಸುವ ಕೆಲಸದ ನಿಮಿತ್ಯವಾಗಿ ಜ್ಞಾನಸುಧಾ ಇನ್ನೋವೇಟಿವ್ ಸೊಲ್ಯೂಷನ್ಸ್‌ ಬೆಳಗಾವಿಯ ಕಚೇರಿಗೆ ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಭೇಟಿ ನೀಡಿ ಪರಿಶೀಲಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಕಡೆ ಸ್ಮಾರ್ಟ್ ಕ್ಲಾಸ್ ಗಳು ನಿರ್ಮಾಣವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಸರಳವಾಗಿ ಉತ್ತಮ ಶಿಕ್ಷಣವನ್ನು ನೀಡುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ.
ಜ್ಞಾನಸುಧಾ ಇನ್ನೋವೇಟಿವ್ ಸೊಲ್ಯೂಷನ್ಸ್ ಚನ್ನರಾಜ ಹಟ್ಟಿಹೊಳಿ ಮಾರ್ಗದರ್ಶನದಲ್ಲಿ  ಕೆಲಸ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ಸಲುವಾಗಿ ಆಯಾ ವಿಭಾಗಳನ್ನು ವಿಂಗಡನೆ ಮಾಡಿಕೊಂಡಿದೆ. ಅದರಂತೆ ಚಟುವಟಿಕೆಗಳನ್ನು ಪ್ರಾರಂಭಿಸಿದೆ.
ಈ ಕಚೇರಿಗೆ ಚನ್ನರಾಜ ಹಟ್ಟಿಹೊಳಿ ಭೇಟಿ ಕೊಟ್ಟು ಆಯಾ ವಿಭಾಗಗಳಾದ ಬೆಸ್ಟ್ ಎನಿಮೇಟರ್, ಬೆಸ್ಟ್ ಕಂಟೆಂಟ್ ಡೆವಲಪರ್, ಬೆಸ್ಟ್ ಟೆಕ್ನಿಕಲ್ ಟೀಮ್, ಬೆಸ್ಟ್ ವಾಯ್ಸ್ ಓವರ್ ಆರ್ಟಿಸ್ಟ್ ಹಾಗೂ ಬೆಸ್ಟ್ ಸೇಲ್ಸ್ ಇವುಗಳ ಬಗ್ಗೆ ತಿಳಿದುಕೊಂಡು ಇವುಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದವರಿಗೆ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ ಆರ್ ಪಾಟೀಲ್, ಎಂ ಡಿ ರಾಹುಲ್ ಮಲನಾಯ್ಕ್, ಸಿಇಓ ರೋಹಿತ್ ಮಲನಾಯ್ಕ್, ಸಿಎಸ್ಓ ಸ್ಟಿವನ್ ಕುಮಾರ ಹಾಗೂ ಅಲ್ಲಿನ ಎಲ್ಲ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.