GIT add 2024-1
Laxmi Tai add
Beereshwara 33

ಜೀವನ ಪರ್ಯಂತ ಪೂಜಿಸಲ್ಪಡುವ ಸ್ಥಾನದಲ್ಲಿ ಶಿಕ್ಷಕರು ನಿಲ್ಲುತ್ತಾರೆ ​- ಲಕ್ಷ್ಮೀ ಹೆಬ್ಬಾಳಕರ್​

ಶಿಕ್ಷಕರ ದಿನಾಚರಣೆ

Anvekar 3
Cancer Hospital 2

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಜೀವನ ಪರ್ಯಂತ ಪೂಜಿಸಲ್ಪಡುವ ಸ್ಥಾನದಲ್ಲಿ ಶಿಕ್ಷಕರು ನಿಲ್ಲುತ್ತಾರೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

 

ಜಿಲ್ಲಾ ಪಂಚಾಯತ​ ಬೆಳಗಾವಿ​, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ,​ ಗ್ರಾಮೀಣ ವಲಯ​ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ​ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಖಾಸ​ಬಾ​ಗ ಸಾಯಿ ಭವನದಲ್ಲಿ ಆಯೋಜಿಸಲಾಗಿದ್ದ 61ನೇ ಶಿಕ್ಷಕರ ದಿನಾಚರಣೆ​,​ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ​ ಕಾರ್ಯಕ್ರಮ​ ಉದ್ಘಾ​ಟಿಸಿ ಅವರು ಮಾತನಾಡುತ್ತಿದ್ದರು. 
 
ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದು. ​ಭಾರತ ಇಂದು ವಿಶ್ವಗುರುವಾಗಿ ನಿಲ್ಲುವುದಕ್ಕೆ ಶಿಕ್ಷಕರೇ ಕಾರಣ. ಇಡೀ ಸಮಾಜದ ಗೌರವಕ್ಕೆ ಶಿಕ್ಷಕರು ಪಾತ್ರರು. ನನ್ನ ಜೀವನದಲ್ಲಿ ನಾನು ಈ ಮಟ್ಟಕ್ಕೇರಲು, ಜೀವನದಲ್ಲಿ ಅಲ್ಪವಾದರೂ ಸಾಧನೆ ಮಾಡಿದ್ದೇನೆಂದರೆ ಅದಕ್ಕೆ ಶಿಕ್ಷಕರೇ ಕಾರಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಇದೇ ಸಮಯದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ 2021ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ತೆಗೆದುಕೊಂಡ ಪ್ರಥಮ, ದ್ವೀತಿಯ ಹಾಗೂ ತೃತೀಯ ಶ್ರೇಣಿಗಳಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು​ ನಾಗನೂರು ರುದ್ರಾಕ್ಷಿಮಠದ​ ಶ್ರೀ​  ಅಲ್ಲಮಪ್ರಭು ಮಹಾಸ್ವಾಮಿಗಳು​ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ  ಮೈತ್ರೇಯಿಣಿ ಗದಿಗೆಪ್ಪಗೌಡರ್, ಕರ್ನಾಟಕನ ಪ್ರೌಢ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಾಲ್ಟರ್ ಡಿ ಮೆಲ್ಲೋ, ಎಂ ಎಂ ಸಿಂಧೂರ, ಭೀಮಪ್ಪ ಲಾಳಿ, ಕ್ಷೇತ್ರ ಶಿಕ್ಷಣಾಧಿಕಾರಿ​  ರುದ್ರಗೌಡ ಜುಟ್ಟನವರ, ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ದಾನವಾಡಕರ್, ತಾಲೂಕಿನ ಎಲ್ಲ​ ಪ್ರಾಥಮಿಕ,​ ಪ್ರೌ​ಢ​ಶಾಲೆಯ ಶಿಕ್ಷಕ, ಶಿಕ್ಷಕಿಯರು, ಶಿಕ್ಷಣ ಇಲಾಖೆಯ ಎಲ್ಲ ​ಅಧಿಕಾರಿಗಳು ಉಪಸ್ಥಿತರಿದ್ದರು.
Emergency Service

https://pragati.taskdun.com/belgaum-news/lakshmi-hebbalkar-said-that-all-principles-of-jainism-are-ideal-for-the-entire-society/

https://pragati.taskdun.com/belagavi-news/dharmasthala-gramabhivriddi-samsthe-is-doing-what-a-government-does-lakshmi-hebbalkar/

https://pragati.taskdun.com/belagavi-news/belagavirural-mla-laxmihebbalkar-felicitation-stbaptistchurch-mlcchannarajhattiholi-mrinalhebbalkar/

Bottom Add3
Bottom Ad 2