Advertisement -Home Add

ಬಡಾಲ ಅಂಕಲಗಿಯಲ್ಲಿ ಸಂಭ್ರಮವೋ ಸಂಭ್ರಮ

50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ, ಯಾತ್ರಿ ನಿವಾಸ

50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ, ಯಾತ್ರಿ ನಿವಾಸ

​ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಡಾಲ ಅಂಕಲಗಿಯಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಗ್ರಾಮ ದೇವಿಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಯಾತ್ರಿ ನಿವಾಸ ನಿರ್ಮಾಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಅನುದಾನ​ದಲ್ಲಿ​ ​ಭೂಸೇನಾ ನಿಗಮ ಕಾರ್ಯ​ಗತಗೊಳಿಸಲಿರುವ​​ ​ಟ್ಟೂ 50 ಲಕ್ಷ  ರೂ​. ವೆಚ್ಚದಲ್ಲಿ ​ನಡೆಯಲಿರುವ ಕಾಮಗಾರಿಗಳಿಗೆ​ ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.​ ಬೃಹತ್ ಯೋಜನೆಯನ್ನು ಗ್ರಾಮಕ್ಕೆ ಕೊಡುಗೆಯಾಗಿ ನೀಡುತ್ತಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆದೊಯ್ದರು. ಊರಲ್ಲೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜನರು ಡೊಳ್ಳು ಭಾರಿಸುತ್ತ, ಪಟಾಕಿ ಸಿಡಿಸಿ ಸಂಭ್ರಮಿಸಿದರು.​
ದೇವಸ್ಥಾನಗಳು ನಮ್ಮ ಸಂಸ್ಕ್ರತಿಯ ಪ್ರತೀಕವಾಗಿದ್ದು ಅವುಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವ ಕಾಯಕವನ್ನು ನಾವೆಲ್ಲ ಕೂಡಿಕೊಂಡು ಮಾಡಬೇಕಿದೆ.
​ಇಂದಿನ​ ಯುವ ಪೀಳಿಗೆ​  ದೇವಸ್ಥಾನಗಳಿಗೆ ತೆರಳುವು​ದು​ ಕಡಿಮೆಯಾಗಿದೆ, ​ ಒಳ್ಳೆಯ ಸಂಸ್ಕಾರಗಳೊಂದಿಗೆ ಪುರಾಣ, ಪ್ರವಚನ, ಭಗವದ್ಗೀತೆ ಹಾಗೂ ಇತರ ಆಧ್ಯಾತ್ಮದ ಬೀಜಗಳನ್ನು ಬಿತ್ತುವುದರೊಂದಿಗೆ ​ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯ​. ಇಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯ ಅಂತಹ ವಾತಾವರಣವನ್ನು ತರಲಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಆಶಿಸಿದರು. 
ಈ ಸಂದರ್ಭದಲ್ಲಿ ಗ್ರಾಮದ​ ಹಿರಿಯರು, ಸಿ ಸಿ ಪಾಟೀಲ,​ ಸುರೇಶ ಇಟಗಿ, ಗೌ​ಸ್​ ಜಾಲಿಕೊಪ್ಪ, ಶ್ರೀಕಾಂತ ಮದುಭರಮಣ್ಣವರ, ರಾಮನಗೌಡ ಪಾಟೀಲ, ಸಿದ್ದಪ್ಪ ಚಾಪಗಾಂವ, ಪಡೆಪ್ಪ ಅರಳಿಕಟ್ಟಿ, ಅರ್ಜುನ ಅರ್ಜುನವಾಡಿ, ಪ್ರಕಾಶ ಬೆಳಗಾವಿ, ಸೋಮನಗೌಡ ಪಾಟೀಲ, ವಿಠ್ಠಲ ಅರ್ಜುನವಾಡಿ, ರಾಮಪ್ಪ ಕೊಳೆಪ್ಪನವರ, ಶಂಕರ ಚಾಪಗಾಂವ, ರಾಮಪ್ಪ ಶೀಗಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.