Yoga add Final 1
KLE1099 Add

ಬಿಐಇಸಿ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ ಕೆಎಲ್‌ಎಸ್ ಜಿಐಟಿಗೆ ತೃತೀಯ ಸ್ಥಾನ

“KLS GIT bagged 3rd place in the BIEC International exhibition”

GIT Add 3
Beereshwara add 12

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಏಳನೇ ಆವೃತ್ತಿಯಾದ, ಐಎಂಟೆಕ್ಸ್   ಫಾರ್ಮಿಂಗ್ 2022, ಆಗ್ನೇಯ ಏಷ್ಯಾದ ಅತಿದೊಡ್ಡ ಪ್ರದರ್ಶನವನ್ನು, ಲೋಹದ ರಚನೆಯ ತಂತ್ರಜ್ಞಾನಗಳ ಕುರಿತು, 16 ರಿಂದ 21 ಜೂನ್ 2022 ರ ವರೆಗೆ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (ಬಿಐಇಸಿ) ನಲ್ಲಿ ಆಯೋಜಿಸಿತ್ತು. 16 ದೇಶಗಳಿಂದ 350 ಕ್ಕೂ ಹೆಚ್ಚು ಪ್ರದರ್ಶಕರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಜಿಐಟಿ, ತಮ್ಮ ಸಂಶೋಧನಾ ಕಾರ್ಯವನ್ನು ಐ-2 (ಇಂಡಸ್ಟ್ರಿ – ಇನ್‌ಸ್ಟಿಟ್ಯೂಟ್ ಪೆವಿಲಿಯನ್) ನಲ್ಲಿ ಪ್ರದರ್ಶಿಸಿತು ಮತ್ತು “ಚಿಕ್ಕ 3ಡಿ ಪ್ರಿಂಟರ್‌ಗಳ ಬೆಡ್ ಗಾತ್ರದ ಮಿತಿಯನ್ನು ನಿವಾರಿಸಲು 3ಡಿ ಮುದ್ರಿತ ಭಾಗಗಳ ಸೇರ್ಪಡೆ/ ವೆಲ್ಡಿಂಗ್” ಎಂಬ ಶೀರ್ಷಿಕೆಯ ಅವರ ಅತ್ಯುತ್ತಮ ಪ್ರಾಜೆಕ್ಟ್ ಕೆಲಸಕ್ಕಾಗಿ ನಗದು ಬಹುಮಾನದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಈ ಸಂಶೋಧನಾ ಕಾರ್ಯವನ್ನು ಪ್ರೊ.ವಿವೇಕ್ ತಿವಾರಿ ಮತ್ತು ಡಾ.ವಿನಾಯಕ್ ಆರ್.ಮಲಿಕ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಭಿಷೇಕ್ ಸಾಳುಂಕೆ, ಮಧುರಂ ಮಂತ್ರಿ, ಆರತಿ ಕಾಲಭೈರವ್, ಪ್ರಾಚಿ ಮಂಗಳೆ, ಓಂಕಾರ್ ದೇಸಾಯಿ ಮತ್ತು ಶಿವರಾಜ್ ಚವ್ಹಾಣ ಪ್ರಸ್ತುತ ಪಡಿಸಿದ್ದರು. ಡಾ.ಅರುಣಕುಮಾರ ಪಿ. ಪ್ರೊ.ವೀಣಾ ಬಡಿಗೇರ್, ಪ್ರೊ. ಪ್ರಜ್ಞಾ ಕುಲಕರ್ಣಿ, ಪ್ರೊ.ಎಂ.ಸತ್ತಿಗೇರಿ ಅವರು ಕೆಎಲ್‌ಎಸ್ ಜಿಐಟಿಯನ್ನು ಪ್ರತಿನಿಧಿಸಿದರು. ಜಿಐಟಿಯು ಐಐಟಿ ಬಾಂಬೆ, ಐಐಟಿ ಮದ್ರಾಸ್, ಎಂಐಟಿ ಪುಣೆಯಂತಹ ಪ್ರಮುಖ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಈ ಬಹುಮಾನವನ್ನು ಪಡೆದುಕೊಂಡಿತು.

ರಾಜೇಂದ್ರ ಬೆಳಗಾಂವಕರ, ಕೆಎಲ್‌ಎಸ್ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷರು, ಡಾ. ಜಯಂತ ಕಿತ್ತೂರ ಪ್ರಾಚಾರ್ಯರು, ಡಾ.ಹರ್ಷಿತ್ ಬಿ. ಕುಲಕರ್ಣಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು,  ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ತಂಡದ ಈ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಕೆಎಲ್‌ಎಸ್ ಜಿಐಟಿಯಲ್ಲಿ ಕ್ಯಾಂಪಸ್ ಸಂದರ್ಶನ ಮತ್ತು ವೃತ್ತಿ ಯೋಜನೆಗಳ ಅಗತ್ಯತೆಗಳ ಕುರಿತು ಕಾರ್ಯಾಗಾರ

Home add- Bottom