GIT add 2024-1
Laxmi Tai add
Beereshwara 33

ವೈವಿಧ್ಯಮಯ ಸೇವೆಯತ್ತ ಕೋರೆ ಸೌಹಾರ್ದ ಸಹಕಾರಿ

ಆರ್ಥಿಕ ವರ್ಷದಲ್ಲಿ ೬.೧೧ ಕೋಟಿ ರೂಗಳ ನಿವ್ವಳ ಲಾಭ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಮಾಂಜರಿ- ಇಂದಿನ ತಾಂತ್ರಿಕ ಯುಗದಲ್ಲಿ ಸಹಕಾರಿ ಸಂಸ್ಥೆಗಳು ಪೈಪೋಟಿಯ ಮೂಲಕ ಸೇವಾ ಕ್ಷೇತ್ರದಲ್ಲಿ ಮುನ್ನುಗ್ಗಬೇಕಾದ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಬೇಕಿದೆ ಎಂದು ಸಂಸ್ಥೆಯ ಸಂಸ್ಥಾಪಕರು ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

Emergency Service

ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಜರುಗಿದ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ ೩೧ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದ ಅವರು, ಸಹಕಾರಿಯು ಆರ್ಥಿಕ ವರ್ಷದಲ್ಲಿ ೬.೧೧ ಕೋಟಿ ರೂಗಳ ನಿವ್ವಳ ಲಾಭಗಳಿಸಿದ್ದು, ಸಹಕಾರ ಸಂಸ್ಥೆಗಳು ಕೇವಲ ಲಾಭಕ್ಕಾಗಿ ಕೆಲಸ ಮಾಡಬಾರದು. ಸಾರ್ವಜನಿಕರಿಗೆ ಅವಶ್ಯವಿರುವ ಸೇವೆಗಳನ್ನು ಒದಗಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ರೈಲು, ವಿಮಾನ ಬುಕ್ಕಿಂಗ್, ವಿಮಾ ನೋಂದಣಿ ಮಾಡಿಕೊಳ್ಳಲು ಆರಂಭಿಸಲಾಗಿದೆ ಎಂದರು.
ಸಮಾಜದ ಎಲ್ಲ ಪ್ರತಿಭಾವಂತರ ಬದಲು ಸಹಕಾರಿಯ ವತಿಯಿಂದ ೫ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ದತ್ತು ಪಡೆದು ಅವರಿಗೆ ಉಚಿತ ಶಿಕ್ಷಣ ನೀಡಲಾಗುವುದು. ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಧನಸಹಾಯ ನೀಡಲಾಗುವುದು ಎಂದರು.
ಸಹಕಾರಿಯು ಪ್ರಸಕ್ತ ಸಾಲಿನಲ್ಲಿ ೨.೧೮ ಕೋಟಿ ಶೇಅರ್ ಬಂಡವಾಳ,೨೨.೮೯ಕೋಟಿ ರೂಗಳ ನಿ ೭೩೬ ಕೋಟಿ ರೂಗಳಿಗೂ ಠೇವು ಸಂಗ್ರಹ ೭೭೪೭ ಕೋಟಿ ರೂಗಳ ದುಡಿಯುವ ಬಂಡವಾಳದೊಂದಿಗೆ ೬.೧೧ ಕೋಟಿ ರೂಗಳಿಗೂ ಮೀರಿ ಲಾಭ ಗಳಿಸಿದ್ದು,ಸದಸ್ಯರಿಗೆ ಪ್ರತಿಶತ ೧೫ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದರು.
ಸಹಕಾರಿಯ ಆಮಂತ್ರಿತ ದಿಗ್ದರ್ಶಕ ಅಮಿತ ಕೋರೆ ಮಾತನಾಡಿ, ಆರ್ಥಿಕ ಕ್ಷೇತ್ರದಲ್ಲಿ ಹಲವಾರು ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಸ್ಥೆಗಳ ಪೈಪೋಟಿಯಲ್ಲಿಯೂ ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ಕಳೆದ ೫ ವರ್ಷಗಳಲ್ಲಿ ಮೂರು ಪಟ್ಟು ಠೇವು ಸಂಗ್ರಹಿಸಿದ್ದು ೭೭೪೭ ಕೋಟಿ ರೂಗಳ ದುಡಿಯುವ ಬಂಡವಾಳ ಹೊಂದಿರುವುದಕ್ಕೆ ಗ್ರಾಹಕರು, ರೈತ ಸದಸ್ಯರು ನಮ್ಮ ಸಹಕಾರಿಯ ಮೇಲೆ ಇಟ್ಟ ವಿಶ್ವಾಸವೇ ಕಾರಣ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರ ಜೀವವು ಮುಖ್ಯ ಅದಕ್ಕಾಗಿಯೇ ವೈಯಕ್ತಿಕ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೂ ಜಿವ ವಿಮೆ ಹಾಗೂ ವಾಹನ ವಿಮೆ ಸೌಲಭ್ಯದ ವಿಶೇಷ ಯೋಜನೆಯನ್ನು ಸಹಕಾರಿಯಲ್ಲಿ ಆರ್ಥಿಕ ವರ್ಷದಿಂದ ಜಾರಿಗೆ ತರಲಾಗಿದ್ದು ಅದರ ಸದುಪಯೋಗಪಡೆದುಕೊಳ್ಳಬೇಕೆಂದರು.
ಅಧ್ಯಕ್ಷ ಮಹಾಂತೇಶ ಪಾಟೀಲ ಮಾತನಾಡುತ್ತ, ಸಹಕಾರಿಯ ೩೯ ಶಾಖೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚಿನ ವ್ಯವಹಾರ ಮಾಡಿದ ಹಾರೂಗೇರಿ ಶಾಖೆ ಹಾಗೂ ನಗರ ಪ್ರದೇಶದಲ್ಲಿನ ದಾವಣಗೇರೆ ಶಾಖೆಗೆ ಪ್ರಥಮ ಬಹುಮಾನ ನಗದು ಹಣ ಹಾಗೂ ಪ್ರಮಾಣ ಪತ್ರ ನೀಡಿ ಡಾ.ಪ್ರಭಾಕರ ಕೋರೆ ಹಾಗೂ ಅಮಿತ ಕೋರೆ ವಿತರಿಸಿದರು.
ಪ್ರಧಾನ ವ್ಯವಸ್ಥಾಪಕ ಡಿ.ಎಸ್.ಕರೋಶಿ ವಿಷಯಪಟ್ಟಿ ಮಂಡಿಸಿದರು.
ಭರತೇಶ ಬನವನೆ, ಅಜೀತ ದೇಸಾಯಿ, ಕೆ.ಕೆ.ಮೈಶಾಳೆ, ಸಿಎ ವ್ಹಿ.ಎ.ಕರ‍್ಹಾಡಕರ, ಸಹಕಾರಿಯ ಉಪಾಧ್ಯಕ್ಷ ಶೋಭಾ ಜಕಾತೆ, ಸಂಚಾಲಕರಾದ ಮಲ್ಲಿಕಾರ್ಜುನ ಕೋರೆ, ಸಿದಗೌಡ ಮಗದುಮ್ಮ, ನೆಹರು ಚಿಕಲಿ, ಪಿಂಟು ಹಿರೇಕುರುಬರ, ಮಹಾದೇವ ಪೋಳ, ಶೈಲಜಾ ಪಾಟೀಲ, ಬಸಗೌಡಾ ಆಸಂಗಿ, ಡಾ.ಸುಕುಮಾರ ಚೌಗಲೆ, ಲಿಂಬಾಜಿ ನಾಗರಾಳೆ, ಕಾಡಪ್ಪಾ ಸಂಗೋಟೆ, ಜ್ಯೋತಿಗೌಡಾ ಪಾಟೀಲ, ಸಚೀನ ಕುಟೋಳೆ, ಗಣಪತಿ ಕಮತೆ, ಜಯಶ್ರೀ ಮೇದಾರ, ಪಾರ್ವತಿ ಧರನಾಯಕ್ ಸೇರಿದಂತೆ ಸಂಸ್ಥೆಯ ಎಲ್ಲ ನಿರ್ದೇಶಕರು ಹಾಗೂ ಸಲಹಾ ಸಮಿತಿಗಳ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.

Bottom Add3
Bottom Ad 2