*ಬೆಳಗಾವಿ: ಸ್ನೇಹಿತನನ್ನೇ ಕೊಚ್ಚಿ ಕೊಲೆಗೈದ ಯುವಕ*

ಪ್ರಗತಿವಾಹಿನಿ ಸುದ್ದಿ: ಸ್ನೇಹಿತರ ನಡುವೆ ಸಾಲದ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಗೌಡರ (30) ಕೊಲೆಯಾದ ಯುವಕ. ದಯಾನಂದ ಗುಂಡ್ಲೂರ ಎಂಬಾತ ತನ್ನ ಸ್ನೇಹಿತ ಮಂಜುನಾಥ್ ನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಕೃತ್ಯದ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ದಯಾನಂದ್ ನಿಂದ 2000 ರೂಪಾಯಿ ಹಣ ಪಡೆದಿದ್ದ ಮಂಜುನಾಥ್ ಒಂದು ವಾರದಲ್ಲಿ ವಾಪಸ್ ಕೊಡುವುದಾಗಿ ಹೇಳಿದ್ದ. ವಾರದ ಬಳಿಕ ಹಣ … Continue reading *ಬೆಳಗಾವಿ: ಸ್ನೇಹಿತನನ್ನೇ ಕೊಚ್ಚಿ ಕೊಲೆಗೈದ ಯುವಕ*