*ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ; ಒಂದೇ ಕುಟುಂಬದ ಐವರ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಬಸವನಗಲ್ಲಿಯಲ್ಲಿ ನಡೆದಿದೆ. ಲಲಿತಾ ಭಟ್ (48), ಮೋಹನ್ ಭಟ್ (56), ಕಮಲಾಕ್ಷಿ ಭಟ್ (80), ಗೋಪಾಲಕೃಷ್ಣ ಕೃಷ್ಣ ಭಟ್ (84) ಹಾಗೂ ಹೇಮಂತ್ ಭಟ್ (27) ಗಾಯಾಳುಗಳು. ಇವರೆಲ್ಲ ಉಡುಪಿಯ ಆದಿ ಉಡುಪಿಯವರು. ಕುಟುಂಬದ ಇನ್ನೋರ್ವ ಸದಸ್ಯ ಶರತ್ ಮನೆಯಿಂದ ಹೊರಹೋಗಿದ್ದರಿಂದ ಪಾರಾಗಿದ್ದಾರೆ.Home add -Advt ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಖಡೇ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. … Continue reading *ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ; ಒಂದೇ ಕುಟುಂಬದ ಐವರ ಸ್ಥಿತಿ ಗಂಭೀರ*