*ಬೆಳಗಾವಿಯಲ್ಲಿ ಮಳೆ ಅಬ್ಬರ: 24 ಮನೆಗಳಿಗೆ ಹಾನಿ*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮಘಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯ ಹೊಡೆತಕ್ಕೆ 24 ಮನೆಗಳು ಹಾನಿಯಾಗಿವೆ. ಖಾನಾಪುರ ತಾಲೂಕಿನ ಗ್ರಾಮೀಣ ಹೋಬಳಿಯಲ್ಲಿ 12, ಜಾಂಬೋಟಿ ಹೋಬಳಿಯಲ್ಲಿ 4, ಬೀಡಿ ಹೋಬಳಿಯಲ್ಲಿ 3, ಗುಂಜಿ ಹೋಬಳಿಯಲ್ಲಿ 3 ಮನೆಗಳಿಗೆ ಹಾನಿಯಾಗಿದೆ ಎಂದು ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕ್ವಾಡ್ ಮಾಹಿತಿ ನೀಡಿದ್ದಾರೆ. ಹಲವು ಮನೆಗಳು ಬೀಳುವ ಆತಂಕದಲ್ಲಿವೆ. ಖಾನಾಪುರ ಭಾಗದಲ್ಲಿ ಮಲಪ್ರಭಾ, ಪಾಂಡ್ರಿ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ಹಲವೆಡೆ ಜಲಾವೃತಗೊಂಡಿವೆ. ಈ ಭಾಗದ … Continue reading *ಬೆಳಗಾವಿಯಲ್ಲಿ ಮಳೆ ಅಬ್ಬರ: 24 ಮನೆಗಳಿಗೆ ಹಾನಿ*