ಅಧ್ವಾನಗಳ ಆಗರ ಸ್ಮಾರ್ಟ್ ಸಿಟಿ ಕಾಮಗಾರಿ -ಟೋಪಣ್ಣವರ್ ಆರೋಪ

ಪಿಎಂಸಿ ಮತ್ತು ಐಸಿಸಿಸಿ ಗುತ್ತಿಗೆದಾರರಾಗಿರುವ ಬಿಇಎಲ್ ಬದಲಾವಣೆ ಮಾಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಬೆಳಗಾವಿ ಸ್ಮಾರ್ಟ್‌ಸಿಟಿ ಕಂಪನಿ ಪಿಎಂಸಿ ಮತ್ತು ಐಸಿಸಿಸಿ ಗುತ್ತಿಗೆದಾರರಾಗಿರುವ ಬಿಇಎಲ್ ನ್ನು ಬದಲಾವಣೆ ಮಾಡಬೇಕೆಂದು ಬೆಳಗಾವಿ ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ೨೦ ಸ್ಮಾರ್ಟ್‌ಸಿಟಿಗಳ ಪೈಕಿ ಬೆಳಗಾವಿ ನಗರ ಆಯ್ಕೆಯಾಗಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅನುದಾನವೂ ಬಿಡುಗಡೆಯಾಗಿದ್ದು, ಆದರೆ ಬೆಳಗಾವಿ ಸ್ಮಾರ್ಟ್‌ಸಿಟಿಯ ಪಿಎಂಸಿ ಟ್ಯಾಕ್ಟಬೆಲ್ ಇಂಡಿಯಾ ಕಂಪನಿ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿದೆ.

ಇವರ ಒಪ್ಪಂದದ ಪ್ರಕಾರ ಎಷ್ಟು ಜನ ಇಲ್ಲಿ ಕೆಲಸಕ್ಕೆ ಇರಬೇಕಾಗಿತ್ತೋ ಅಷ್ಟು ಜನ ಇಲ್ಲ. ಮತ್ತು ಎಷ್ಟು ಅನುಭವ ಇರಬೇಕಿತ್ತೋ ಅದು ಇಲ್ಲ. ಇವರ ಕಾರ್ಯವೈಖರಿಯಿಂದ ಸ್ಮಾರ್ಟ್‌ಸಿಟಿ ಕಾಮಗಾರಿ ಪೂರ್ಣಗೊಳ್ಳದೆ ವಿಳಂಬವಾಗಿದೆ. ಪಿಎಂಸಿ ಟ್ರಾಕ್ಟಬೆಲ್ ಕಂಪನಿಯು ಗುತ್ತಿಗೆದಾರರದಿಂದ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಇವರ ತಂಡದಲ್ಲಿ ಒಪ್ಪಂದದ ಪ್ರಕಾರ ಸ್ಮಾರ್ಟ್‌ಸಿಟಿ ತಜ್ಞರು ಇಲ್ಲ ಎಂದು ಆರೋಪಿಸಿದ್ದಾರೆ.

ರಸ್ತೆ ತಜ್ಞರು ಇಲ್ಲ

ಕರ್ನಾಟಕದಲ್ಲಿ ಒಟ್ಟು ೬ ಸ್ಮಾರ್ಟ್‌ಸಿಟಿಗಳಿವೆ. ಬೆಳಗಾವಿ ಸ್ಮಾರ್ಟ್‌ಸಿಟಿಗೆ ಒಟ್ಟಾರೆ ೧೦೦೦ ಕೋಟಿ ಅನುದಾನ ಇದೆ. ಬೆಳಗಾವಿ ಸ್ಮಾರ್ಟ್‌ಸಿಟಿಯು ರಸ್ತೆ ನಿರ್ಮಾಣಕ್ಕೆ ೩೫೦ ಕೋಟಿ ರೂ. ಕಾಮಗಾರಿಗೆ ಟೆಂಡರ್ ಕರೆದಿದ್ದಾರೆ. ಅದು ಪಿಎಂಸಿಯಲ್ಲಿ ರಸ್ತೆ ತಜ್ಞರು ಇಲ್ಲದೆ ೩೫೦ ಕೋಟಿ ರೂ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದಾರೆ. ಈ ಕಂಪನಿ ಮಾಡುತ್ತಿರುವ ಸ್ಮಾರ್ಟ್ ರಸ್ತೆ ಮುಂಚಿನ ರಸ್ತೆ ಹಾಗೂ ಸದ್ಯ ಮಾಡುತ್ತಿರುವ ರಸ್ತೆಗೆ ಬಹಳಷ್ಟು ವ್ಯತ್ಯಾಸ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದೆ ಬೆಳಗಾವಿಯಲ್ಲಿ ನೆರೆ ಹಾವಳಿಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಚರಂಡಿ  ಸರಾಗವಾಗಿ ಹರಿಯದಂತೆ ಯೋಜನೆ ರೂಪಿಸಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೆ ಮಳೆ ಬಂದರೆ ಇವರು ಮಾಡಿದ ರಸ್ತೆಯ ಮೇಲೆ ಚರಂಡಿ ನೀರು ನಿಲ್ಲುವ ಪರಿಸ್ಥಿತಿ ಬರುತ್ತದೆ. ಸದ್ಯ ಸ್ಮಾರ್ಟ್‌ಸಿಟಿ ರಸ್ತೆಯ ಕಾಮಗಾರಿಯಾಗುತ್ತಿವೆ. ಅಲ್ಲಿ ಗುತ್ತಿಗೆದಾರರು ಅವರಿಗೆ ಸಹಾಯವಾಗುವ ರೀತಿ ಸರ್ವೆ ಮಾಡಿ ಆ ನಕ್ಷೆಯನ್ನು ಪಿಎಂಸಿಗೆ ನೀಡಿದ್ದಾರೆ. ಪಿಎಂಸಿಯಲ್ಲಿ ರಸ್ತೆ ತಜ್ಞರೇ ಇಲ್ಲ. ಅದಕ್ಕೆ ಪಿಎಂಸಿ ತಂಡದ ನಾಯಕ ಸಹಿ ಮಾಡುತ್ತಾರೆ. ಹೀಗಾಗಿ ಗುತ್ತಿಗೆದಾರರ ಮನಸ್ಸಿಗೆ ಬಂದ ಹಾಗೆ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಮೇಲೆ ನೀರು

ಕೆಲ ಕಡೆಗಳಲ್ಲಿ ನಾಲೆಯ ನೀರು ಹರಿಯದಂತೆ ರಸ್ತೆ ಮಾಡುತ್ತಿದ್ದಾರೆ. ಮುಂದೆ ದೊಡ್ಡ ಮಳೆ ಬಂದರೆ ಆ ಮಳೆಯ ನೀರು ನಾಲೆಗೆ ಹರಿಯದೆ ಗುತ್ತಿಗೆದಾರರು ಸಿದ್ದಪಡಿಸಿದ ರಸ್ತೆಯ ಮೇಲೆ ನೀರು ಹರಿಯುತ್ತದೆ. ಇದು ಅವೈಜ್ಞಾಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಹುತೇಕ ಪಿಎಂಸಿಯ ಟ್ರಾಕ್ಟಬೆಲ್ ಕಂಪನಿಗೆ ಸ್ಮಾರ್ಟ್‌ಸಿಟಿಯ ಕನಿಷ್ಠ ಜ್ಞಾನ ಇಲ್ಲ. ಈಗಾಗಲೇ ಅವರು ಬಹಳಷ್ಟು ಕಾಮಗಾರಿ ವಿಳಂಬ ಮಾಡಿದ್ದಾರೆ. ಕೂಡಲೇ ಈ ಕಂಪನಿಯನ್ನು ಸರಕಾರ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಬೆಳಗಾವಿ ಸ್ಮಾರ್ಟ್‌ಸಿಟಿ ಲಿ. ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ಕಾಮಗಾರಿಯನ್ನು ಭಾರತ ಇಲೆಕ್ಟ್ರೀಕಲ್ ಲಿ. ಕಂಪನಿಗೆ ಟೆಂಡರ್ ನೀಡಿದ್ದಾರೆ. ಈ ಕಂಪನಿ (ಬಿಇಎಲ್) ಗೆ ಸ್ಮಾರ್ಟ್‌ಸಿಟಿಯಲ್ಲಿ ಕೆಲಸ ಮಾಡುವ ಅರ್ಹತೆ ಇರಲಿಲ್ಲ. ಆದರೆ ಸ್ಮಾರ್ಟ್‌ಸಿಟಿಯ ಮೊದಲ ಕಾಮಗಾರಿ ನೀಡಿದ್ದಾರೆ. ಮೂರು ವರ್ಷ ಕಳೆದರೂ ಆ ಕಾಮಗಾರಿ ಮುಗಿದಿಲ್ಲ. ನಮ್ಮ ಕಡೆ ಕೆಲಸ ತೆಗೆದುಕೊಂಡು ಉಪಗುತ್ತಿಗೆದಾರರಿಗೆ ನೀಡಿದ್ದಾರೆ. ಆದ್ದರಿಂದ ಮೂರು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಜ್ಞಾನ ಇಲ್ಲ

ಈ ಕಾಮಗಾರಿಗೆ ಕುರಿತಂತೆ ಪಿಎಂಸಿ ಕಡೆ ಐಸಿಟಿ ತಜ್ಞರು ಇರುತ್ತಾರೆ. ಆದರೆ ಐಸಿಟಿಯವರಿಗೆ ಏನೂ ಜ್ಞಾನ ಇಲ್ಲದವರನ್ನು ಬೆಳಗಾವಿ ಸ್ಮಾರ್ಟ್‌ಸಿಟಿಗೆ ನೇಮಕ ಮಾಡಿದ್ದಾರೆ. ಈಗಾಗಲೇ ೫ ಜನ ಐಸಿಟಿಯವರು ಬದಲಾವಣೆಯಾಗಿದ್ದಾರೆ. ಇವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಸದ್ಯದಲ್ಲಿರುವ ಐಸಿಟಿ ತಜ್ಞ ಅಂಬರೀಶ್ ಅವರಿಗೆ ಜ್ಞಾನ ಇಲ್ಲ.

ಇವರು ಮೂರನೇ ವ್ಯಕ್ತಿಯಿಂದ ಪರಿಶೀಲನೆ ಮಾಡಿಸುತ್ತಿದ್ದಾರೆ. ಅದು ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಗಳಿಂದ ಮಾಡಿಸುತ್ತಿದ್ದಾರೆ. ಬಿಇಎಲ್ ಮತ್ತು ಟ್ರಾಕ್ಟಬೆಲ್ ಇಂಡಿಯಾ ಕಂಪನಿಯನ್ನು ಬದಲಾವಣೆ ಮಾಡಿ ಬೇರೆ ಕಂಪನಿಯವರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೇ ಉಗ್ರವಾದ ಹೋರಾಟ ಮಾಡುವುದಾಗಿ ಟೋಪಣ್ಣವರ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Smart city officials forgotten industrial area

7 cracks in Smart city Road – Pragativahini exclusive

ಸ್ಮಾರ್ಟ್ ಸಿಟಿ ರಸ್ತೆಯಲ್ಲಿ 7 ಕಡೆ ಬಿರುಕು: ಡಾಂಬರ್ ಹೊಯ್ದು ಮುಚ್ಚಲು ಯತ್ನ -Pragativahini Exclusive