GIT add 2024-1
Laxmi Tai add
Beereshwara 33

ಕೆಪಿಎಲ್- ಮೊದಲ ಪಂದ್ಯದಲ್ಲಿ ಬೆಂಗಳೂರು ಎದುರಾಳಿ ಮೈಸೂರು 

16 ದಿನಗಳ ಕಾಲ ನಡೆಯಲಿರುವ  ಕ್ರಿಕೆಟ್ ಹೋರಾಟ

Anvekar 3
Cancer Hospital 2

ಕೆಪಿಎಲ್- ಮೊದಲ ಪಂದ್ಯದಲ್ಲಿ ಬೆಂಗಳೂರು ಎದುರಾಳಿ ಮೈಸೂರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರೆಡ್‌ಮಿ ಕರ್ನಾಟಕ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧ ಸೆಣಸಲಿದ್ದು, ಟೂರ್ನಿಯ ಮೊದಲ ಪಂದ್ಯ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಡ್ರೀಮ್ XI  ನಿಂದ ಪ್ರಾಯೋಜಕತ್ವ ಹೊಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶ್ರೇಷ್ಠ ಮಟ್ಟದ ಟಿ20 ಲೀಗ್‌ನಲ್ಲಿ ರಾಜ್ಯದ ಪ್ರತಿಭಾವಂತ ಯುವ ಆಟಗಾರರು ಹಿರಿಯ ಆಟಗಾರರಿಗೆ ಸವಾಲೊಡ್ಡಲಿದ್ದಾರೆ. ಮುಂದಿನ 16 ದಿನಗಳ ಕಾಲ ನಡೆಯಲಿರುವ  ಕ್ರಿಕೆಟ್ ಹೋರಾಟದಲ್ಲಿ ತಂಡಗಳು 10 ಲಕ್ಷ ರೂ. ನಗದು ಬಹುಮಾನ ಹಾಗೂ ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿವೆ.
ಶುಕ್ರವಾರ ಮೊದಲ ಪಂದ್ಯಕ್ಕೂ ಮುನ್ನ ಕೆಪಿಎಲ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ. ಆಗಸ್ಟ್ 31ರಂದು ಮೈಸೂರಿನಲ್ಲಿ ಫೈನಲ್ ಕದನ ನಡೆಯಲಿದೆ. ‘ಪ್ರತಿ ವರ್ಷದಂತೆ ಕೆಪಿಎಲ್‌ಗೂ ಈ ಬಾರಿಯೂ ಸಾಕಷ್ಟು ಸಂಭ್ರಮದ ನಿರೀಕ್ಷೆ ಇದೆ. ಸಂಘಟಕರು, ಆಟಗಾರರು ಹಾಗೂ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಲು ಸಾಕಷ್ಟು ಉತ್ಸುಕರಾಗಿದ್ದಾರೆ,‘ ಎಂದು ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಈ ಸಂದರ್ಭದಲ್ಲಿ ಹೇಳಿದರು.

ಅಮಿತ್ ವರ್ಮಾ ನಾಯಕತ್ವ

Emergency Service

ಹರಾಜಿನಲ್ಲಿ 6 ಲಕ್ಷ ರೂ.ಗಳಿಗೆ ಖರೀದಿಸಲ್ಪಟ್ಟ ಜೊನಾಥನ್ ರಾಂಗ್ಸೇನ್,  ಬೆಂಗಳೂರು ಬಾಸ್ಟರ್ಸ್ ತಂಡವನ್ನು ಮುನ್ನಡೆಸಲಿದ್ದು, ಈ ತಂಡ ಕೆಪಿಎಲ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಅಂಗಣಕ್ಕಿಳಿಯಲಿದೆ. ಈ ತಂಡ ಆರಂಭದಲ್ಲಿ ಬೆಂಗಳೂರು ಬ್ರಿಗೇಡಿಯರ್ಸ್ ಎಂದು ಕರೆಯಲ್ಪಡುತ್ತಿತ್ತು, ವಿ, ಕೌಶಿಕ್, ರೋಹನ್ ಕದಮ್ ಹಾಗೂ ನಿಕಿನ್ ಜೋಶ್ ಅವರಂಥ ಯುವ ಆಟಗಾರರಿಂದ ಕೂಡಿರುವ ತಂಡ ಈ ಬಾರಿ ದಿಟ್ಟ ಸವಾಲೊಡ್ಡಲು ಸಜ್ಜಾಗಿದೆ.
ಅನುಭವಿ ಆಟಗಾರ ಅಮಿತ್ ವರ್ಮಾ ನಾಯಕತ್ವ  ಹೊಂದಿರುವ ಮೈಸೂರು ವಾರಿಯರರ್ಸ್, ಸಾಕಷ್ಟು  ಅನುಭವಿ  ಆಟಗಾರರಿಂದ ಕೂಡಿರುವ ತಂಡವಾಗಿದ್ದು, ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಅಂಗಣಕ್ಕಿಳಿಯಲಿದೆ. ಅನಿರುಧ್ ಜೋಶಿ ಈ ಚುಟುಕು ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಪ್ರಸಿದ್ಧರಾಗಿದ್ದು, ಕರ್ನಾಟಕ ತಂಡದ ಪರ ಸಾಕಷ್ಟು ಪಂದ್ಯಗಳನ್ನಾಡಿದ ಅನುಭವ ಹೊಂದಿರುತ್ತಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ತೋರಿದ ಪರಿಣಾಮ  ಅನಿರುಧ್  ಜೋಶಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ  ರಾಯಲ್ ಚಾಲೆಂಜರ್ಸ್ ತಂಡವನ್ನು ಸೇರಿಕೊಳ್ಳುವ ಅವಕಾಶ ಹೊಂದಿದ್ದರು. ಆದರೆ ತಂಡದಲ್ಲಿ ಆಡುವ ಅವಕಾಶ ಸಿಗದಿದ್ದರೂ, ಅನುಭವಿ ಆಟಗಾರರ ಒಡನಾಟ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದು ಸ್ಪಷ್ಟ.. ಇದು ಕೆಪಿಎಲ್‌ನಲ್ಲಿ ಸ್ಫೋಟಕ ಆಟಕ್ಕೆ ನೆರವಾಗುವುದು ಸ್ಪಷ್ಟ.
ಹರಾಜಿನಲ್ಲಿ 7.1 ಲಕ್ಷ ಮೊತ್ತ ಗಳಿಸಿ ಅತಿ ಹೆಚ್ಚು ಮೌಲ್ಯಕ್ಕೆ ಖರೀದಿಸಲ್ಪಟ್ಟ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಮಾತ್ರವಲ್ಲದೆ ಜೆ. ಸುಚಿತ್ ತಂಡದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ. ಅಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಆಟಗಾರ. ಇಂಡಿಯನ್ ಪ್ರೀಮಿಯರರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ  ಅನುಭವ  ಹೊಂದಿರರುವ ಸುಚಿತ್, ಕಳೆದ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ  ಅನುಭವವನ್ನೂ ಹೊಂದಿದ್ದರು. ಬ್ಯಾಟಿಂಗ್‌ನಲ್ಲಿ ಅಪಾರ   ಅನುಭವ ಹೊಂದಿರುವ ಡಿ. ನಿಶ್ಚಲ್, ತಂಡಕ್ಕೆ ಬಲ ತುಂಬಬಲ್ಲ ಆಟಗಾರ. ಪಂದ್ಯಕ್ಕೆ ಮಳೆಯೇ ಪ್ರಮುಖ ಸವಾಲಾಗಿದರೆ. ಅನೇಕ ಯುವ ಆಟಗಾರರ ಬದುಕಿಗೆ ತಿರುವು ನೀಡಬಲ್ಲ ಋತುವೊಂದಕ್ಕೆ ಯುವಕರು ಕಾಲಿಡಲಿದ್ದಾರೆ ಎಂಬುದೂ ಗಮನಾರ್ಹ.

ಟಸ್ಕರ್ಸ್ ಪಡೆಗೆ ವೇದಾ ನಾಯಕಿ
ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿ ಅಂಗಣದಲ್ಲಿ ನಡೆಯಲಿರುವ ಮಹಿಳಾ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಬಳ್ಳಾರಿ ಟಸ್ಕರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ಟಸ್ಕರ್ಸ್ ಪಡೆ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಸೆಣಸಲಿದೆ.  ರಾಜ್ಯದಲ್ಲಿ ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆಎಸ್‌ಸಿಎ ಕೆಪಿಎಲ್ ಅವಧಿಯಲ್ಲೇ ಮಹಿಳಾ ಪಂದ್ಯಗಳನ್ನು ಆಯೋಜಿಸುತ್ತಿದೆ.
ಮೂರು ಮಹಿಳಾ ತಂಡಗಳು ಆರು ಪಂದ್ಯಗಳನ್ನು ಆಡಲಿವೆ. ಬಳ್ಳಾರಿ, ಬೆಳಗಾವಿ ಮತ್ತು ಶಿವಮೊಗ್ಗ ಫ್ರಾಂಚೈಸಿಗಳು ಮಹಿಳಾ ತಂಡಗಳಿಗೆ ಪ್ರಾಯೋಜಕತ್ವ ನೀಡಿವೆ. ಕೆಪಿಎಲ್‌ಗೆ ಸಂವಾದಿಗಿ ಈ ಪಂದ್ಯಗಳು ಆಗಸ್ಟ್ 18, 19. 20, 22 ಮತ್ತು 23 ರಂದು ನಡೆಯಲಿವೆ.  ಪ್ಯಾಂಥರ್ಸ್ ತಂಡವನ್ನು ಜಿ. ದಿವ್ಯಾ ಮುನ್ನಡೆಸಲಿದ್ದು, ಶಿವಮೊಗ್ಗ ಲಯನ್ಸ್ ತಂಡಕ್ಕೆ ರಕ್ಷಿತಾ ಕೃಷ್ಣಪ್ಪ ನಾಯಕಿಯಾಗಿರುತ್ತಾರೆ.

ಪಂದ್ಯಗಳನ್ನು ವೀಕ್ಷಿಸಲು ಟಿಕೆಟ್ ಖರೀದಿಗಾಗಿ ಕ್ರೀಡಾಂಗಣದ ಬಾಕ್ಸ್ ಆಫೀಸ್ ಕೌಂಟರ್‌ಗಳು ಪಂದ್ಯ ಇಲ್ಲದ ದಿನ  ಬೆಳಿಗ್ಗೆ 11 ರಿಂದ ಸಂಜೆ 6ರ ವರೆಗೆ ತೆರೆದಿರುತ್ತದೆ. ಪಂದ್ಯ ಇರುವ ದಿನ  ಬೆಳಿಗ್ಗೆ 11 ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. 18ನೇ ನಂಬರ್ ಗೇಟ್‌ನಲ್ಲಿ ಟಿಕೆಟ್‌ಗಳು ಮಾರಾಟಕ್ಕೆ ಲಭ್ಯವಿದೆ .  ಗೇಟ್ ನಂ. 19ರಲ್ಲಿ ಆನ್‌ಲೈನ್‌ನಲ್ಲಿ ಕಾಯ್ದಿರಿಸಿದವರಿಗೆ ಟಿಕೆಟ್ ನೀಡಲಾಗುತ್ತದೆ.
ತಂಡಗಳು- ಬೆಂಗಳೂರು ಬ್ಲಾಸ್ಟರ್ಸ್ ಎದುರಾಳಿ ಮೈಸೂರು ವಾರಿಯರ್ಸ್
ಪಂದ್ಯದ ಸಮಯ- ರಾತ್ರಿ 7ರಿಂದ
ಉದ್ಘಾಟನಾ  ಸಮಾರಂಭದ ಸಮಯ-  ಸಂಜೆ 5ಗಂಟೆ.

ಮಹಿಳಾ ಪಂದ್ಯಗಳು
ಆಗಸ್ಟ್ 18- ಪ್ಯಾಂಥರ್ಸ್ ಎದುರಾಳಿ ಟಸ್ಕರ್ಸ್ (ಆರ್‌ಡಬ್ಲ್ಯುಎ್ ಗ್ರೌಂಡ್),  ಆಗಸ್ಟ್ 19- ಶಿವಮೊಗ್ಗ ಲಯನ್ಸ್ ಎದುರಾಳಿ ಪ್ಯಾಂಥರ್ಸ್ (ಆರ್‌ಆರ್‌ಎಂಸಿ), ಆಗಸ್ಟ್ 20- ಲಯನ್ಸ್ ಎದುರಾಳಿ ಟಸ್ಕರ್ಸ್ (ಆರ್‌ಡಬ್ಲ್ಯುಎ್), ಆಗಸ್ಟ್ 22- ಲಯನ್ಸಸ್ ಎದುರಾಳಿ ಟಸ್ಕರ್ಸ್ (ಆರ್‌ಆರ್‌ಎಂಸಿ), ಆಗಸ್ಟ್ 23- ಪ್ಯಾಂಥರ್ಸ್ ಎದುರಾಳಿ ಟಸ್ಕರ್ಸ್ (ಆರ್‌ಡಬ್ಲ್ಯುಎ್),

ಮಹಿಳಾ ಪಂದ್ಯಗಳ ಸಮಯ- ಬೆಳಿಗ್ಗೆ 10ರಿಂದ 
Bottom Add3
Bottom Ad 2