ಶಿವಾಜಿ ಜಗತ್ತು ಕಂಡ ಶ್ರೇಷ್ಠ ಸೇನಾನಿ: ರಾಮಚಂದ್ರ ಕಾಕಡೆ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ‌ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಗತ್ತು ಕಂಡ ಶ್ರೇಷ್ಠ ಸೇನಾನಿ ಶಿವಾಜಿ ಮಹಾರಾಜರು. ಸ್ವರಾಜ್ಯಕ್ಕಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಪಣತೊಟ್ಟು ತಾಯಿ ಜೀಜಾಬಾಯಿ ಮತ್ತು ಗುರು ದಾದಾಜಿ ಕೊಂಡದೇವ ಇವರ ಆಶ್ರಯದಲ್ಲಿ ಬೆಳೆದ ಶ್ರೇಷ್ಠ ಮಹಾನ್‌ ವ್ಯಕ್ತಿ. ಅವರ ಆದರ್ಶವನ್ನು ಪ್ರತಿಯೊಬ್ಬರು ಜಿವನದಲ್ಲಿ  ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ರಾಮಚಂದ್ರ ಕಾಕಡೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ  ನಗರದ ಶಿವಾಜಿ ಉದ್ಯಾನವನದಲ್ಲಿ ಬುಧವಾರ  ಏರ್ಪಡಿಸಲಾಗಿದ್ದ ಶಿವಾಜಿ ಮಹಾರಾಜರ ೩೯೩ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.
 ಶಿವಾಜಿ  ಮಹಾರಾಜರ ಜೀವನವೇ ಒಂದು ಸಂದೇಶ. ಅಂತವರನ್ನು ಕೇವಲ ಅಚರಣೆಗೆ ಸೀಮಿತಗೊಳಿಸದೇ ಅವರ ಆದರ್ಶಗಳ ಮೇಲೆ ಎಲ್ಲರೂ ನಡೆಯಬೇಕಿದೆ.
ಯಾವತ್ತು ಕೂಡ ಮೊಘಲ್ ದೊರೆಗಳ ವಿರುದ್ಧ ಇತಿಹಾಸದಲ್ಲಿ ನಿರಂತರ ಹೊರಾಟ ಮಾಡಿದ  ಏಕೈಕ ವೀರ ಸೇನಾನಿಯೆಂದರೆ ಶಿವಾಜಿ ಮಹಾರಾಜರು. ಮನೆ ಕುಟುಂಬ ಲೆಕ್ಕಿಸದೇ ತನ್ನ ಪ್ರಾಣವೇನಿದ್ದರೂ ಕೇವಲ ಸ್ವರಾಜಕ್ಕಾಗಿ ಎಂದು ಘೋಷಿಸಿದರಲ್ಲದೇ ಎಲ್ಲ ಸಮಾಜದ ಜನರ ಏಳ್ಗೆಗೆ ಶ್ರಮಿಸಿದರು.
ಶಿಸ್ತು ಮತ್ತು ವೀರ ಪರಾಕ್ರಮಿಯಾದ ಶಿವಾಜಿ ಮಹಾರಾಜರು  ಮೊಘಲರ ದೊಡ್ಡ ಪ್ರಮಾಣದ ಸೈನ್ಯದ ವಿರುದ್ದ ಕೇವಲ ಶಕ್ತಿಯಿಂದಷ್ಟೇ ಅಲ್ಲದೆ ಯುಕ್ತಿಯನ್ನು ಉಪಯೋಗಿಸಿ ಹೋರಾಟ ಮಾಡಿದವರು ಎಂದು ರಾಮಚಂದ್ರ ಕಾಕಡೆ ಹೇಳಿದರು.
Nirani -Senitiser1
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ, ತಹಶಿಲ್ದಾರ ಎಸ್.ಎಂ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ನಾಡಗೀತೆ ಹಾಡುವ ಮೂಲಕ ಮತ್ತು ಗಜರಾಜ ತಂಡದಿಂದ ಧೊಲ್ ತಾಶ್ ಬಾರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಮುಂಜಾನೆ ಭವ್ಯ ಮೆರವಣಿಗೆ:

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆಗೆ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಚಾಲನೆ ನೀಡಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್  ಲೋಕೇಶ್ ಕುಮಾರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಕೂಡ ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿದರು
ಶಿವಾಜಿ ಉದ್ಯಾನವನದಿಂದ ಆರಂಭಗೊಂಡ ಮೆರವಣಿಗೆಯು ಫುಲಬಾಗ ಗಲ್ಲಿ ಮಾರ್ಗವಾಗಿ ನಾಥಪೈ ವೃತ್ತದವರೆಗೆ ತಲುಪಿತು.