ಎಂ.ಕೆ.ಹೆಗಡೆ ಸೇರಿದಂತೆ ಐವರಿಗೆ ವೊಕೇಶನಲ್ ಎಕ್ಸಲೆನ್ಸ್ ಅವಾರ್ಡ್

ಸಮಾಜಕ್ಕೆ ನೀಡುತ್ತಿರುವ ಮೌಲಿಕ ಕೊಡುಗೆಗಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಸೇರಿದಂತೆ ಐವರಿಗೆ ಬೆಳಗಾವಿಯ ರೋಟರಿ ಕ್ಲಬ್ ಆಫ್ ಬೆಳಗಾಂ ಸೌಥ್ ವೊಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಗತಿ ಮೀಡಿಯಾ ಹೌಸ್ ಪ್ರೊಪರೈಟರ್ ಮತ್ತು ಪ್ರಗತಿ ವಾಹಿನಿ ಸಂಪಾದಕ ಎಂ.ಕೆ.ಹೆಗಡೆ, ಆಟೋ ಚಾಲಕ ಮಂಜುನಾಥ ಪೂಜಾರಿ, ಪಶು ವೈದ್ಯ ಇಲಾಖೆಯ ವೈಶಾಲಿ ಶಹಾಪುರಕರ್, ಹರ್ಬಲ್ ಹೆಲ್ತ್ ಜೂಸ್ ವಿತರಕ ವಿನಾಯಕ ಗೋಡೆ ಹಾಗೂ ಹೆಸ್ಕಾಂ ಲೈನ್ ಮನ್ ಬಸಪ್ಪ ಪಾಟೀಲ ಪ್ರಶಸ್ತಿ ಪಡೆದಿದ್ದಾರೆ.
ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿರುವವರ ವೃತ್ತಿಪರ ಸೇವೆ ಮತ್ತು ತನ್ಮೂಲಕ ಸಮಾಜಕ್ಕೆ ನೀಡುತ್ತಿರುವ ಮೌಲಿಕ ಕೊಡುಗೆಗಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಸೋಮವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕ್ರೆಡೈ ಸಂಸ್ಥೆಯ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ, ರೋಟರಿ 3170ರ ಮಾಜಿ ಗವರ್ನರ್ ಆನಂದ ಕುಲಕರ್ಣಿ, ರೋಟರಿ ಕ್ಲಬ್ ಆಫ್ ಬೆಳಗಾಂ ಸೌಥ್ ಅಧ್ಯಕ್ಷ ಜಯಸಿಂಹ ಬೆಳಗಲಿ, ಕಾರ್ಯದರ್ಶಿ ಎಸ್.ಡಿ.ಸಾಯಗಾವಿ, ವೊಕೇಶನಲ್ ಸರ್ವೀಸ್ ಡೈರೆಕ್ಟರ್ ಗೋವಿಂದ ಮಿಸಾಳೆ ಸೇರಿದಂತೆ ರೋಟರಿ ಕ್ಲಬ್ ಹಿರಿಯ ಪದಾಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಎಂ.ಕೆ.ಹೆಗಡೆ, ವೈಶಾಲಿ ಶಹಾಪುರಕರ್, ಮಂಜುನಾಥ ಪೂಜಾರಿ ಹಾಗೂ ವಿನಾಯಕ ಗೋಡೆ ಮಾತನಾಡಿದರು. ಜಯಸಿಂಹ ಬೆಳಗಲಿ ಕಾರ್ಯಕ್ರಮ ನಿರ್ದೇಶಿಸಿದರು.
ಕಳೆದ ವರ್ಷ ರೋಟರ್ ಇ ಕ್ಲಬ್ ಕೂಡ ಎಂ.ಕೆ.ಹೆಗಡೆ ಅವರಿಗೆ ವೊಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿದ್ದು ಇಲ್ಲಿ ಉಲ್ಲೇಖನೀಯ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ವಿರೋಧಿ ಹೋರಾಟ, ಉಡಾನ್ ಯೋಜನೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಸೇರಿಸುವ ಸಂಬಂಧದ ಹೋರಾಟ, ಹಸಿರು ಬೆಳಗಾವಿಗಾಗಿ ಒಂದು ದಿನ ಸೇರಿದಂತೆ ಅನೇಕ ಸಾಮಾಜಿಕ ಹೋರಾಟಗಳನ್ನು ಮುಂಚೂಣಿಯಲ್ಲಿ ನಿಂತು ಸಂಘಟಿಸಿ  ಎಂಕೆ.ಹೆಗಡೆ ಯಶಸ್ವಿಯಾಗಿದ್ದಾರೆ.
ಕನ್ನಡ ಜನಾಂತರಂಗ ಹಾಗೂ ಸುವರ್ಣ ನ್ಯೂಸ್ ವಿಶೇಷ ವರದಿಗಾರರಾಗಿ, ಕನ್ನಡಪ್ರಭದ ಪ್ರಧಾನ ವರದಿಗಾರರಾಗಿ, ವಿಜಯಕರ್ನಾಟಕ ಹಾಗೂ ವಿಜಯವಾಣಿ ಪತ್ರಿಕೆಗಳಲ್ಲಿ ಸ್ಥಾನಿಕ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸಧ್ಯ ಬೆಳಗಾವಿಯಲ್ಲಿ ಪ್ರಗತಿ ಮೀಡಿಯಾ ಹೌಸ್ ಮತ್ತು ಪ್ರಗತಿವಾಹಿನಿ ನ್ಯೂಸ್ ಪೋರ್ಟಲ್ ನಡೆಸುತ್ತಿದ್ದಾರೆ.
Nirani -Senitiser1