*ಧಾರಾಕಾರ ಮಳೆ: ಫ್ಲೈಓವರ್, ರಸ್ತೆಗಳು ಜಲಾವೃತ: ವಾಹನ ಸವಾರರ ಪರದಾಟ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡು ನದಿಯಂತಾಗಿವೆ. ಬೆಂಗಳೂರಿನಾದ್ಯಂತ ಸಂಜೆಯಾಗುತ್ತಿದ್ದಂತೆ ಆರಂಭವಾದ ಮಳೆಯ ಅಬ್ಬರ ನಿರಂತರವಾಗಿ ಸುರಿಯುತ್ತಿದ್ದು, ಫ್ಲೈಓವರ್ ಗಳು, ಪ್ರಮುಖ ರಸ್ತೆಗಳೇ ಜಲಾವೃತಗೊಂಡಿವೆ. ಪ್ರಮುಖ ರಸ್ತೆಗಳ ಪರಿಸ್ಥಿತಿಯೇ ಹೀಗಾದರೆ ಇನ್ನು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಗುಂಡಿಮಯ ರಸ್ತೆಗಳಂತು ತುಂಬಿ ಹರಿಯುತ್ತಿದ್ದು, ಚರಂಡಿ ನೀರು ರಸ್ತೆಗಳಿಗೆ ನುಗ್ಗಿ ಬೋರ್ಗರೆದು ಹರಿಯುತ್ತಿವೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಗ್ಗು ಪ್ರದೇಶಗಳಿಗೆ, ಮನೆಗಳಿಗೆ ನೀರು ನುಗ್ಗಿ ಅವಾಂತರಗಳು … Continue reading *ಧಾರಾಕಾರ ಮಳೆ: ಫ್ಲೈಓವರ್, ರಸ್ತೆಗಳು ಜಲಾವೃತ: ವಾಹನ ಸವಾರರ ಪರದಾಟ*