*ಏಳು ಮಂದಿ ಹತ್ಯೆ ಬಳಿಕ ಬಾಲಕನಿಂದ ನಾಟಕ*: *ಆಡಿಯೋದಲ್ಲಿದೆ ಬೆಚ್ಚಿಬೀಳಿಸುವ ಸತ್ಯ*

ಪ್ರಗತಿವಾಹಿನಿ ಸುದ್ದಿ: ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಬಳಿಕವೂ ಆರೋಪಿ ತನ್ನ ಕ್ರೌರ್ಯವನ್ನು ಮುಂದುವರಿಸಿದ್ದಾನೆ. ಕುಟುಂಬದವರ ಮೊಬೈಲ್‌ಗಳಿಗೆ ಬರುತ್ತಿದ್ದ ಕರೆಗಳಿಗೆ ಉತ್ತರಿಸಿ, ಯಾರಿಗೂ ಅನುಮಾನ ಬರದಂತೆ ನೋಡಿಕೊಂಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲ, ಅಮಾಯಕ ಬಾಲಕನನ್ನೇ ಬಳಸಿಕೊಂಡು ಸಂಬಂಧಿಕರಿಗೆ ಸುಳ್ಳು ಮಾಹಿತಿ ಕೊಡಿಸಿದ್ದಾನೆ. ಇದೀಗ ಬಾಲಕ ಮಾತನಾಡಿರುವ ಆಡಿಯೋ ಬಹಿರಂಗವಾಗಿದ್ದು, ಪ್ರಕರಣದ ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಏಳು ಮಂದಿ ಹತ್ಯೆ ಬಳಿಕ ಆರೋಪಿ ಇಂದುಶೇಖರ್ ಮೃತರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ … Continue reading *ಏಳು ಮಂದಿ ಹತ್ಯೆ ಬಳಿಕ ಬಾಲಕನಿಂದ ನಾಟಕ*: *ಆಡಿಯೋದಲ್ಲಿದೆ ಬೆಚ್ಚಿಬೀಳಿಸುವ ಸತ್ಯ*