*ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ: ಗ್ರಾಮ ಆಡಳಿತಾಧಿಕಾರಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಗ್ರಾಮ ಆಡಳಿತಾಧಿಕಾರಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೆಚ್.ತಿಲಕ್ ಕುಮಾರ್ (48) ಮೃತ ಗ್ರಾಮ ಆಡಳಿತಾಧಿಕಾರಿ. ಮೃತ ಹೆಚ್.ತಿಲಕ್ ಕುಮಾರ್, ಹೊನ್ನಾಳಿ ಪಟ್ಟಣದ ದುರ್ಗಿಗುಡಿ ನಿವಾಸಿ. ಚೆನ್ನಗಿರಿ ತಾಲೂಕಿನ ಕೊಗಲೂರು ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Home add -Advt *ಬೆಳಗಾವಿಯ ಹೆದ್ದಾರಿ ಕಾಮಗಾರಿ ವಿಳಂಬ: ಗುತ್ತಿಗೆದಾರನಿಗೆ 3.2 ಕೋಟಿ ದಂಡ ಹಾಕಿದ ನಿತಿನ್ ಗಡ್ಕರಿ*