ಮಾಳಮಾರುತಿ ಠಾಣೆ ಪೊಲೀಸ್‌ರಿಂದ ಬೈಕ್ ಕಳ್ಳನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿತನಾದ ವಿಠಲ ಸದೆಪ್ಪಾ ಆರೇರ ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಅವನು ಬೈಕ್‌ಗಳ ಕದ್ದ ಬಗ್ಗೆ ಒಪ್ಪಿಕೊಂಡಿದ್ದಾ‌ನೆ.‌ ಆತನಿಂದ ಸುಮಾರು 6.00,000/- ರೂ ಬೆಲೆಯ ಒಟ್ಟು 7 ಬೈಕ್ ಗಳು (ಯಮಹಾ-1. ಸ್ಟೆಂಡರ್-2. ಸ್ಟೆಂಡರ್ ಪ್ರೋ-2. ಎಚ್‌ಎಫ್ ಡಿಲಕ್ಸ್-1, ಜುಪಿಟರ್-1) ವಶಕ್ಕೆ ಪಡೆದು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ. … Continue reading ಮಾಳಮಾರುತಿ ಠಾಣೆ ಪೊಲೀಸ್‌ರಿಂದ ಬೈಕ್ ಕಳ್ಳನ ಬಂಧನ