*ಹಕ್ಕಿಜ್ವರ: 2,400 ಕೋಳಿಗಳು ಸಾವು*

ಪ್ರಗತಿವಾಹಿನಿ ಸುದ್ದಿ: ಚಿಕ್ಕಬಳ್ಳಾಪುರದ ಬಳಿಕ ಬಳ್ಳಾರಿಗೂ ಹಕ್ಕಿಜ್ವರ ಕಾಲಿಟ್ಟಿದ್ದು, 2400 ಕೋಟಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಳ್ಳಾರಿಯ ಕುರೇಕುಪ್ಪ ಗ್ರಾಮದ ಸರ್ಕಾರಿ ಪೌಲ್ಟ್ರಿ ಪಾರ್ಮದಲ್ಲಿರುವ 2400 ಕೋಳಿಗಳು ಹಕ್ಕಿಜ್ಬರದಿಂದ ಮೃತಪಟ್ಟಿವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಫೆ.21ರಿಂದ ಈವರೆಗೆ ಹಂತ ಹಂತವಾಗಿ 2400 ಸಾವನ್ನಪ್ಪಿವೆ. ಹಕ್ಕಿಜ್ವರ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕೋಳಿಗಳ ಮಾರಾಟ, ಸಾಗಾಟಗಳ ಮೇಲೆ ನಿಗಾ ವಹಿಸಲಾಗಿದೆ. *ಭೀಕರ ಅಪಘಾತ: ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವು* Home add -Advt