*ಆಟವಾಡಲು ಮೈದಾನಕ್ಕೆ ಬಂದಿದ್ದಾಗ ದುರಂತ: ಗೇಟ್ ಬಿದ್ದು ಬಾಲಕ ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಆಟದ ಮೈದಾನದ ಗೇಟ್ ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಮಲ್ಲೇಶ್ವರಂನ ಬಿಬಿಎಂಪಿ ಮೈದಾನದಲ್ಲಿ ನಡೆದಿದೆ. 10 ವರ್ಷದ ನಿರಂಜನ್ ಮೃತ ಬಾಲಕ. ಭಾನುವಾರವಾದ್ದರಿಂದ ಆಟವಾಡಲೆಂದು ಬಾಲಕ ಮೈದಾನಕ್ಕೆ ಬಂದಿದ್ದ. ಈ ವೇಳೆ ಮೈದಾನದ ಗೇಟ್ ತೆಗೆಯಲೆಂದು ಗೇಟ್ ತಳ್ಳುತ್ತಿದ್ದಂತೆಯೇ ಬಾಲಕನ ಮೈಮೇಲೆಯೇ ಗೇಟ್ ಬಿದ್ದಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಲವು ವರ್ಷಗಳಿಂದಲೂ ಗೇಟ್ ದುರಾವಸ್ಥೆಯಲ್ಲಿದ್ದರೂ ಬಿಬಿಎಂಪಿ ಗೇಟ್ ದುರಸ್ತಿ ಮಾಡಿಲ್ಲ. ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿಯೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. … Continue reading *ಆಟವಾಡಲು ಮೈದಾನಕ್ಕೆ ಬಂದಿದ್ದಾಗ ದುರಂತ: ಗೇಟ್ ಬಿದ್ದು ಬಾಲಕ ದುರ್ಮರಣ*
Copy and paste this URL into your WordPress site to embed
Copy and paste this code into your site to embed