Advertisement -Home Add
Crease wise (28th Jan)
KLE1099 Add

‘ವೈದ್ಯರುಗಳ  ರಾಜೀನಾಮೆ ಮತ್ತು ಉತ್ತ(ರ)ಮ’ ದಾವೆಗಳ ನಿರರ್ಥಕತೆ!

ಆಡಳಿತದ ಕಿರುಕುಳದಿಂದಾಗಿ ಒಂದು ಡಜನ್‌ಗೂ ಹೆಚ್ಚು ಸರ್ಕಾರಿ ವೈದ್ಯರು ತುರ್ತು ಪರಿಸ್ಥಿತಿಗಳಲ್ಲಿ ರಾಜೀನಾಮೆ ನೀಡುತ್ತಾರೆ ಎಂಬುದು ಯಾವುದೇ ಸರ್ಕಾರಕ್ಕೆ ಶೋಭಾದಾಯಕವಲ್ಲ.

 ಶ್ಯಾಮ್ ಹಂದೆ 
ಕೊರೊನಾ ಬಿಕ್ಕಟ್ಟನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ನಿಭಾಯಿಸಿ ಆರೋಗ್ಯ ವ್ಯವಸ್ಥೆ ಸೋತು ಸುಣ್ಣಾಗಿರುವಾಗ,  ಈ ಕ್ಷೇತ್ರಕ್ಕೆ ನಿಜವಾದ ನೈತಿಕ ಬೆಂಬಲ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು  ಅಗತ್ಯದ್ದಾಗಿದೆ.  ಆದರೆ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ 14 ವೈದ್ಯರು ಆಡಳಿತ ಅಧಿಕಾರಿಗಳ ಕಿರುಕುಳ, ಔಷಧಿಗಳ ಅಸಮರ್ಪಕ ಪೂರೈಕೆ ಮತ್ತು ಬಲಿಪಶುಗಳನ್ನಾಗಿ ಮಾಡುತ್ತಿರುವ ನಿಷೇಧಾರ್ತವಾಗಿ ಜಿಲ್ಲಾಧಿಕಾರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
 ಕೊರೊನಾದ ಎರಡನೇ ಅಲೆಗೆ, ಪ್ರಸ್ತುತ ಉತ್ತರ ಪ್ರದೇಶದ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಆರೋಗ್ಯ ವ್ಯವಸ್ಥೆಯು ಬಹುತೇಕ ಕುಸಿದಿದೆ. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವಂತೆ ಕೇಂದ್ರ ಸಚಿವರು, ಸಂಸದರು ಮತ್ತು ಆಡಳಿತಾರೂಢ ಬಿಜೆಪಿಯ ಶಾಸಕರು ಮುಖ್ಯಮಂತ್ರಿಯಲ್ಲಿ ಮನವಿ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ ಪತ್ನಿ ಎರಡು-ಮೂರು ಗಂಟೆಗಳ ಕಾಲ ನೆಲದ ಮೇಲೆ ಮಲಗಬೇಕಾದ ವೀಡಿಯೋವನ್ನು ಬಿಜೆಪಿ ಶಾಸಕನಿಂದಲೇ  ಬಿತ್ತರಿಸಲಾಯಿತು. ಚಿತ್ರೀಕರಿಸಲಾದ ವೀಡಿಯೋ ಗ್ರಾಮೀಣ ಅಥವಾ ಹಳ್ಳಿಯಲ್ಲಿ ಘಟಿಸಿರಲಿಲ್ಲ. ಆಗ್ರಾದಲ್ಲಿ ನಡೆದ ಘಟನೆಯದ್ದಾಗಿತ್ತು. ಹಾಸಿಗೆಗಳ ಕೊರತೆ ಮತ್ತು ಆಡಳಿತದಿಂದ ಅಸಹಕಾರದ ಬಗ್ಗೆ ಬಿಜೆಪಿಯ ಸ್ವಂತ ಶಾಸಕರಿಂದಲೇ ದೂರು ನೀಡಲಾಗುತ್ತಿದೆ. ಕೇಂದ್ರ ಕಾರ್ಮಿಕ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ಅವರು ತಮ್ಮ ಕ್ಷೇತ್ರದ ಆರೋಗ್ಯ ವ್ಯವಸ್ಥೆ ತುಂಬಾ- ದುರ್ಬಲವಾಗಿದೆ ಎಂದು ಮುಖ್ಯಮಂತ್ರಿಗೆ ಪತ್ರ ಕಳುಹಿಸಿದ್ದಾರೆ.
ಕರೋನಾದ ಎರಡನೇ ಅಲೆಗೆ ನಾಲ್ವರು ಬಿಜೆಪಿ ಶಾಸಕರು ಸಾವನ್ನಪ್ಪಿದ್ದಾರೆ. ಉನ್ನಾವ್ ಜಿಲ್ಲೆಯ ರಾಜೀನಾಮೆ ನಾಟ್ಯದಿಂದ ವೈದ್ಯರಿಗೆ ಯಾವ ರೀತಿಯ ಗೌರವ ಸಿಗುತ್ತಿದೆ ಎಂಬ- ಸಂಗತಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ, ಈ ಸಂದರ್ಭದಲ್ಲಿ ವೈದ್ಯರಿಗೆ  ಧೈರ್ಯ ನೀಡುವ ಬದಲು ಉಪ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳಿಂದ ಕಿರುಕುಳ ಆರಂಭವಾಗಿದೆ. ಪ್ರತಿದಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ, ಕೊರೊನಾ ಸೋಂಕಿತರು ಕಂಡುಬಂದಲ್ಲಿ ಅವರನ್ನು ಕ್ವಾರಂಟೈನ್ ಮಾಡುವುದು, ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗಳಿಗೆ ಹಾಜರಾಗುವುದು, ಎಲ್ಲಾ ವರದಿಗಳನ್ನು ಕಳುಹಿಸುವಂತಹ ಕೆಲಸಗಳ ಹೊರೆ ಹೆಚ್ಚಾಗಿದೆ. ಸಭೆಯಲ್ಲಿ ಭಾಗವಹಿಸಲು ಈ ವೈದ್ಯರು ಪ್ರತಿದಿನ 20 ರಿಂದ 30 ಕಿ.ಮೀ ಪ್ರಯಾಣಿಸಬೇಕಾಗುತ್ತದೆ. ಇದಲ್ಲದೆ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೆ ಈ ವೈದ್ಯರನ್ನು ದೂಷಿಸಲಾಗುತ್ತಿದೆ. “ಇಷ್ಟೆಲ್ಲಾ ಮಾಡಿ ಕೂಡ, ನಾವು ಕೆಲಸ ಮಾಡುತ್ತಿಲ್ಲ, ಪರಿಣಾಮ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಚಿತ್ರ ತಯಾರಿಸಲಾಗುತ್ತಿದೆ ” ಎಂದು ವೈದ್ಯರು ತಮ್ಮ ಭಾವನೆ ವ್ಯಕ್ತ ಪಡಿಸಿದ್ದಾರೆ. ಅಂತಹ 14 ವೈದ್ಯರ ರಾಜೀನಾಮೆಯಿಂದ ಉತ್ತರ ಪ್ರದೇಶದಲ್ಲಿ ವೈದ್ಯರ ಮೇಲಾಗುವ ಅನ್ಯಾಯ ಬಹಿರಂಗವಾಗಿದೆ. ರಾಜ್ಯದ ಇತರ ಭಾಗಗಳಲ್ಲಿ ಇದೇ ರೀತಿಯ ಘಟನೆಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
 ಮೂಲತಃ ದೇಶದಲ್ಲಿ ವೈದ್ಯರ ಸಂಖ್ಯೆ ಕಡಿಮೆ. ವಿಶ್ವ ಆರೋಗ್ಯ ಸಂಸ್ಥೆ 1,000 ಜನಸಂಖ್ಯೆಗೆ ಒಬ್ಬ ವೈದ್ಯರ ಅನುಪಾತವನ್ನು ನಿಗದಿಪಡಿಸಿದೆ. ಭಾರತದಲ್ಲಿ, 1457 ಜನಸಂಖ್ಯೆಗೆ ಸರಾಸರಿ ಒಬ್ಬ ವೈದ್ಯರಿದ್ದಾರೆ. ಉತ್ತರ ಪ್ರದೇಶದಲ್ಲಿ, 3767 ಜನಸಂಖ್ಯೆಗೆ ಒಬ್ಬ ವೈದ್ಯರಿರುವಂತಹ ಭೀಕರ ಚಿತ್ರವಿದೆ. ಉತ್ತರಪ್ರದೇಶದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಸುಮಾರು ಆರೂವರೆ ಸಾವಿರ ಸೀಟ್ ಗಳು. ಜನಸಂಖ್ಯೆಗೆ ಹೋಲಿಸಿದರೆ ಈ ಪ್ರಮಾಣವು ಬಹಳ ವಿಷಮ. ಆಡಳಿತದ ಕಿರುಕುಳದಿಂದಾಗಿ ಒಂದು ಡಜನ್‌ಗೂ ಹೆಚ್ಚು ಸರ್ಕಾರಿ ವೈದ್ಯರು ತುರ್ತು ಪರಿಸ್ಥಿತಿಗಳಲ್ಲಿ ರಾಜೀನಾಮೆ ನೀಡುತ್ತಾರೆ ಎಂಬುದು ಯಾವುದೇ ಸರ್ಕಾರಕ್ಕೆ ಶೋಭಾದಾಯಕವಲ್ಲ. ವೈದ್ಯರು ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಹಿಡಿದು ಜಿಲ್ಲಾಧಿಕಾರಿ ಮಟ್ಟದವರೆಗೆ ಪ್ರಯತ್ನಗಳನ್ನು ಪ್ರಾರಂಭಿಸಲಾಯಿತು.
ದಶಕಗಳಲ್ಲಿ ಸಾಧಿಸದ್ದು ನಾಲ್ಕು ವರ್ಷಗಳಲ್ಲಿ ಸಾಧಿಸಲಾಗಿದೆ. ಉತ್ತರ ಪ್ರದೇಶ ಕಳೆದ ನಾಲ್ಕು ವರ್ಷಗಳಲ್ಲಿ ಹೇಗೆ ‘ಉತ್ತಮ ರಾಜ್ಯ’ವಾಗಿ ಮಾರ್ಪಟ್ಟಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರು ತಮ್ಮನ್ನು ತಾವೇ ಪ್ರಶಂಸಿಸುತ್ತಾರೆ. ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವ ವಿಷಯದಲ್ಲಿ ಗ್ರಾಮೀಣ ಪ್ರದೇಶದ ಜನರ ಅಸಮಾಧಾನವೇ ಬಿಜೆಪಿಗೆ ಹೊಡೆತ ಬೀಳಲು ಕಾರಣ ಎಂದು ನಂಬಲಾಗಿದೆ. ಈಗ, ನದಿಯಲ್ಲಿ ತೇಲುತ್ತಿರುವ ಮೃತದೇಹಗಳಿಂದ ಉತ್ತರ ಪ್ರದೇಶ ಸರ್ಕಾರ ಸಾವಿನ ಸಂಖ್ಯೆಯನ್ನು ಅಡಗಿಸಿದೆ ಅಥವಾ ಪರಸ್ಪರ ಶವಗಳನ್ನು ವಿಲೇವಾರಿ ಮಾಡಿದೆಯೋ? ಇಂತಹ  ಆರೋಪಗಳು ಕೇಳಿಬರುತ್ತಿವೆ. ಇವೆಲ್ಲವುಗಳಿಂದ, ‘ಉತ್ತಮ ಪ್ರದೇಶ’ದ ದಾವೆಗಳ ನಿರರ್ಥಕತೆಯು ಸಾಕಷ್ಟು ಸ್ಪಷ್ಟವಾಗಿದೆ ಎನ್ನಬಹುದು.