Yoga add Final 1
KLE1099 Add

ರಾಜ್ಯದಲ್ಲಿ ಒಮಿಕ್ರಾನ್ ಉಪತಳಿ ಪತ್ತೆ; 38 ಮಾದರಿಯಲ್ಲಿ BA.5 ವೈರಸ್ ದೃಢ

ಹೆಚ್ಚುತ್ತಿದೆ ಕೋವಿಡ್ 4ನೆ ಅಲೆ ಆತಂಕ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಡುವೆ ಒಮಿಕ್ರಾನ್ ರೂಪಾಂತರಿಯ ಉಪತಳಿಗಳು ಪತ್ತೆಯಾಗಿವೆ.

ಜೂನ್ 2ರಿಂದ ಸಂಗ್ರಹಿಸಿದ್ದ 44 ಮಾದರಿಗಳ ಪೈಕಿ 38 ಜನರಲ್ಲಿ BA.5 ಎಂಬ ಒಮಿಕ್ರಾನ್ ಉಪತಳಿ ಪತ್ತೆಯಾಗಿದ್ದು ಕೋವಿಡ್ 4ನೇ ಅಲೆ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.

ಇನ್ನು ರಾಜ್ಯದಲ್ಲಿ BA.2, BA.3, BA.4 ಉಪತಳಿಗಳು ಕಂಡುಬರುತ್ತಿದ್ದು, ಈ ರೂಪಾಂತರಿ ವೈರಸ್ ಉಪತಳಿಗಳೇ 4ನೇ ಅಲೆ ವ್ಯಾಪಕವಾಗಿ ಹರಡಲು ಕಾರಣವಾಗಬಹುದು ಈ ನಿಟ್ಟಿನಲ್ಲಿ ಉಪತಳಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.

ದೇಶಾದ್ಯಂತ ಕೋವಿಡ್ ಸೋಂಕು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು, ಕಳೆದ 24 ಗಂಟೆಯಲ್ಲಿ 13,313 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 38 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. 83,990 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಐದು ದಿನ ಭಾರಿ ಮಳೆ

Home add- Bottom