Yoga add Final 1
KLE1099 Add

ಮಕ್ಕಳಿಗೆ ವ್ಯಾಕ್ಸಿನೇಶನ್: ಬೆಳಗಾವಿಯಲ್ಲಿ ದಾಖಲೆ ಸಾಧನೆ

Vaccination of children: record performance in Belgaum

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಬೆಳಗಾವಿ ತಾಲೂಕಿನಲ್ಲಿ ಮಕ್ಕಳ ಕೋವಿಡ್ ವ್ಯಾಕ್ಸಿನೇಶನ್ ನಲ್ಲಿ ದಾಖಲೆಯ ಸಾಧನೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ12 ರಿಂದ 14 ವರ್ಷ ಮತ್ತು 15ರಿಂದ 18 ವರ್ಷದ ಮಕ್ಕಳಿಗೆ ಶಾಲೆ, ಕಾಲೇಜುಗಳಲ್ಲಿ ವ್ಯಾಕ್ಸಿನ್ ಹಾಕಲಾಗುತ್ತಿದೆ. 12 -14 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಮತ್ತು 15 -18 ವರ್ಷದ ಮಕ್ಕಳಿಗೆ  ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ.

ಈವರೆಗೆ 12 ರಿಂದ 14 ವರ್ಷದ 27,707 ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಇದು ಶೇ.99ರಷ್ಟು ಸಾಧನೆಯಾಗಿದೆ. ನಿಗದಿತ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಈ ಮಕ್ಕಳಿಗೆ 2ನೇ ಡೋಸ್ ನೀಡಲಾಗುತ್ತಿದೆ. ಈವರೆಗೆ 13,961 ಮಕ್ಕಳಿಗೆ 2ನೇ ಡೋಸ್ ಲಸಿಕೆ ನೀಡಲಾಗಿದ್ದು, ಶೇ.49.61ರಷ್ಟು ಸಾಧನೆಯಾಗಿದೆ.

15ರಿಂದ 18ರ ವಯೋಮಾನದ 51,860 ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದ್ದು, ಶೇ.97.59ರಷ್ಟು ಸಾಧನೆಯಾದಂತಾಗಿದೆ. ಈ ಮಕ್ಕಳ ಪೈಕಿ 48,367 ಮಕ್ಕಳಿಗೆ 2ನೇ ಡೋಸ್ ಹಾಕಲಾಗಿದ್ದು, ಶೇ.94ರಷ್ಟು ಸಾಧನೆಯಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳಿ ನೇತೃತ್ವದಲ್ಲಿ ಈ ಸಾಧನೆ ಮಾಡಲಾಗಿದ್ದು, ಶೇ.100ರಷ್ಟು ಸಾಧನೆ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

ಚುನಾವಣೆ: ಶನಿವಾರ ಬೆಳಗಾವಿ, ಚಿಕ್ಕೋಡಿಯಲ್ಲಿ BJP ಮಹತ್ವದ ಸಭೆ

 

Home add- Bottom