World Environment Day

ಗ್ರಾಮೀಣ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದೇ ಗುರಿ -ಲಕ್ಷ್ಮಿ ಹೆಬ್ಬಾಳಕರ್

ಆದಷ್ಟು ಬೇಗ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಂಕಲ್ಪ ಮಾಡಿದ್ದೇನೆ ಎಂದ ಶಾಸಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪರಿಹಾರ ನಿಧಿ ಕೊಡಿಸುವ ಮೂಲಕ ನೆರವಾಗಿದ್ದಾರೆ.
ಗ್ರಾಮೀಣ ಕ್ಷೇತ್ರದಲ್ಲಿ ರೈತರು, ಕೂಲಿಕಾರರೇ ಹೆಚ್ಚಿದ್ದಾರೆ. ರೋಗಗಳು ಬಂದಾಗ ಚಿಕಿತ್ಸೆಯ ವೆಚ್ಚ ಭರಿಸಲಾಗದ ಸ್ಥಿಯಲ್ಲಿರುವ ಬಡವರೇ ಹೆಚ್ಚು. ಇಂತವರ ಚಿಕಿತ್ಸೆಗೆ ಲಕ್ಷ್ಮಿ ಹೆಬ್ಬಾಳಕರ್ ನಿರಂತರವಾಗಿ ಸ್ಪಂದಿಸುತ್ತ ಬಂದಿದ್ದು, ಕೆಲವರಿಗೆ 24 ಗಂಟೆಯಲ್ಲೇ ನೆರವು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
  ಬಿಜಗರಣಿಯ ಸುಧಾ ಭೀಮಾ ಅಷ್ಟೇಕರ್ , ಖನಗಾಂವ್ ನ ರಾಮಕ್ಕ ಬಸಪ್ಪ ಪಾಟೀಲ, ತಾರಿಹಾಳದ  ಭೀಮಸು ರಾಜು ಪಾಟೀಲ, ಹೊನ್ನಿಹಾಳದ ಪೂಜಾ ಬೀರಪ್ಪ ಬೆಳಗಾಂವಕರ  ಬಡಸ್ ಇನಾಂ ನ ಮಲ್ಲವ್ವ ಶಿವಾಜಿ ತಾನಾಬ  ಮೊದಲಾದವರಿಗೆ ಆಸ್ಪತ್ರೆಯ ವೆಚ್ಚ ಭರಿಸುವುದಕ್ಕಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಯ ವತಿಯಿಂದ  ಚೆಕ್ ಗಳನ್ನು ವಿತರಿಸಲಾಯಿತು.
 ಇದೇ ವೇಳೆ,  ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಹೊನ್ನಿಹಾಳದ  ಅಶ್ವಿನಿ ಮ ತಳವಾರ  ಹಾಗೂ ಹಂಗರಗಾದ ಸುನಿತಾ ಬಾ ಕಾಂಬಳೆ  ಇವರಿಗೆ ಸಹ ಚೆಕ್ ಗಳನ್ನು ಹಸ್ತಾಂತರಿಸಲಾಯಿತು.
ಜೊತೆಗೆ,  ಹೊನ್ನಿಹಾಳ ಗ್ರಾಮದ ಶಿವಲೀಲಾ ಚ ಈಡ್ಲಿ ಇವರಿಗೆ  ವಿಧವಾ ವೇತನದ ಆದೇಶ ಪತ್ರವನ್ನು ಸಹ ಹಸ್ತಾಂತರಿಸಲಾಯಿತು.
ಗ್ರಾಮೀಣಕ್ಷೇತ್ರದಲ್ಲಿ ಉತ್ತಮವಾದ ಚಿಕಿತ್ಸಾ ಸೌಲಭ್ಯ ಇಲ್ಲದಿರುವುದರಿಂದ ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳಗುತ್ತಿದೆ. ಆದಷ್ಟು ಬೇಗ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಂಕಲ್ಪ ಮಾಡಿದ್ದೇನೆ. ಗ್ರಾಮೀಣ ಜನರ ಸರ್ವಾಂಗೀಣ ಅಭಿವೃದ್ಧಿ ಮತ್ತು ಅವರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದೇ ನನ್ನ ಗುರಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.