
60 ವರ್ಷದ ಮಹಿಳೆಗೆ ಯಶಸ್ವಿ ಟೋಟಲ್ ಫೆಮರ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆ ನಡೆಸಿದ KLE ವೈದ್ಯರ ತಂಡ
ಉತ್ತರ ಕರ್ನಾಟಕದಲ್ಲಿಯೇ ಮೊದಲ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ ಡಾ.ಸಾರಂಗ ಶೇಟೆ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆ.ಎಲ್.ಇ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಮತ್ತು ರಿವಿಷನ್ ಜಾಯಿಂಟ್ ರಿಪ್ಲೇಸ್ ಮೆಂಟ್ ತಜ್ಞ ರಾಗಿರುವ ಡಾ.ಸಾರಂಗ ಶೇಟೆ ಅವರು ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಟಿ.ಎಫ್.ಆರ್ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಆಗಸ್ಟ್ 3ರಂದು ಬೆಳಗಾವಿಯ ಜಿಲ್ಲೆಯ 60 ವರ್ಷದ ಮಹಿಳೆಗೆ ಯಶಸ್ವಿಯಾಗಿ ಟೋಟಲ್ ಫೆಮರ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಇದು ಉತ್ತರ ಕರ್ನಾಟಕದಲ್ಲಿಯೇ ಅಪರೂಪದ ಶಸ್ತ್ರಚಿಕಿತ್ಸೆ ಆಗಿದ್ದು ಭಾರತದಲ್ಲಿ ಕೆಲವೆ ಕಡೆಗಳಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಹಿಂದೆ ಹಲವಾರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿ ಸಂಧಿವಾತ ಪೃಷ್ಟ ನೋವಿನಿಂದ ಬಳಲುತ್ತಿದ್ದು ನಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಡಾ.ಸಾರಂಗ ಶೇಟೆ ಅವರ ನೇತೃತ್ವದಲ್ಲಿ ಡಾ.ಸತೀಶ್ ಪಾಟೀಲ್, ಡಾ.ಕಿರಣ್ ಪಾಟೀಲ, ಡಾ.ಕಲಾಲ ಡಾ.ಮಂಜುನಾಥ್ ಅವರು ಸತತ ಏಳು ಗಂಟೆಗಳ ಕಾಲ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಶಸ್ತ್ರಚಿಕಿತ್ಸೆಗೆ ಶುಶ್ರೂಷಾ ಸಹಾಯಕರಾದ ಅಮಿತ ಧನವಾಡೆ ,ಸುನೀಲ್ ಮತ್ತು ಚೌಗುಲೆ ಅವರು ಸಹಕಾರ ನೀಡಿದರು.
ಡಾ.ಸಾರಂಗ ಶೇಟೆ ಅವರು ಕೆ.ಎಲ್.ಇ ಡಾ ಪ್ರಭಾಕರ ಕೋರೆ ಆಸ್ಪತ್ರೆಯ ಎಲುಬು ಕೀಲು ಶಸ್ತ್ರಚಿಕಿತ್ಸಾ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು ಇದಕ್ಕು ಮೊದಲು ಅಹಮದಾಬಾದ್ ನ ಶಾಲ್ಬಿ ಆಸ್ಪತ್ರೆ ಯ ಡಾ.ಜವಾಹರ ಪಚೋರೆ ,ಗುರಗಾಂವ್ ಅರ್ಟೆಮಿಸ್ ಆಸ್ಪತ್ರೆಯ ಬ್ರಿಗೇಡಿಯರ್ ಡಾ.ಬಿಕೆ ಸಿಂಗ್ ,ಡಾ.ಶೇಖರ್ ಅಗರವಾಲ್ ಸೇರಿದಂತೆ ದೇಶದ ಹೆಸರಾಂತ ವೈದ್ಯರೊಂದಿಗೆ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಡಾ.ಸಾರಂಗ ಶೇಟೆ 2015ರಿಂದ ಕೆ.ಎಲ್.ಇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸಾಮಾಜಿಕ ಕಳಕಳಿಯುಳ್ಳ ವೈದ್ಯ ಎಂದೇ ಹೆಸರಾಗಿದ್ದಾರೆ.
ಡಾ.ಸಾರಂಗ ಶೇಟೆ ಮತ್ತು ಸಹ ವೈದ್ಯರ ತಂಡವನ್ನು ಕಾಹೆರ್ ರಿಜಿಸ್ಟ್ರಾರ್ ಡಾ.ವಿ.ಎ.ಕೋಠಿವಾಲೆ ಅಭಿನಂದಿಸಿದ್ದಾರೆ.
RSS ಪ್ರಮುಖನಿಗೆ ಚಾಕು ಇರಿದ ದುಷ್ಕರ್ಮಿಗಳು
ನಾನು ಮಾತ್ರ ಅವ್ರ ಕಣ್ಣಿಗೆ ಕಾಣಿಸ್ತಿದೀನಾ?; ACB ವಿಚಾರಣೆಗೆ ಹಾಜರಾದ ಜಮೀರ್ ಅಹ್ಮದ್ ವಾಗ್ದಾಳಿ

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ