Advertisement

ವಾರ್ಷಿಕ ಕ್ರೀಡಾ ಕೂಟ

ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ 2019-20ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟಗಳು ಜರುಗಿದವು.

ಕ್ರೀಡಾ ಜ್ಯೋತಿ ಮತ್ತು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬಸವಪ್ರಭು ಕೋರೆ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿದೇ೯ಶಕರಾದ ಲೆಪ್ಟಿನೆಂಟ್, ಡಾ. ಶಿವಾನಂದ ಬುಲಬುಲೆ ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಇಂದಿನ ಯುವಕರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೊಂದಲು ಕ್ರೀಡೆಗಳಲ್ಲಿ ಸ್ಪಧಿ೯ಸಬೇಕೆಂದು  ತಿಳಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ  ಡಿ. ಬಿ ಸೊಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಪ್ರೋ. ವೈಶಾಲಿ ಬೆಳಗಿನ ಸ್ವಾಗತಿಸಿದರು. ಪ್ರೋ. ಪ್ರಭಾಕರ ಕಮತೆ ಪ್ರತಿಜ್ಞಾವಿಧಿ ಬೋಧಿಸಿದರು. ಧಮ೯ರಾಜ ಗೌಡರ, ಕಾವೇರಿ ಹುರಕಡ್ಲಿ ನಿರೂಪಿಸಿದರು. ಲತಾ ಸರದಾರ್, ಎಸ್ ಡಿ ಶಿರಹಟ್ಟಿ, ಎಸ್ ಡಿ ಕಿಲ್ಲೇದಾರ್, ಮೋಹನ ಪಾಟೀಲ, ಸುಭಾಷ್ ಲೈನರ್ ಸೇರಿದಂತೆ ಅನೇಕ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿದ್ದರು.