Beereshwara add4
Crease wise add 8
KLE1099 Add

2020ನೇ ಸಾಲಿನ ಆಸ್ಕರ್​ ಪ್ರಶಸ್ತಿ ಘೋಷಣೆ

ಜಾಕ್ವೀನ್ ಫಿನಿಕ್ಸ್ ಅತ್ಯುತ್ತಮ ನಟ, ರೆನೀ ಜೆಲ್ವೆಗರ್​ ಅತ್ಯುತ್ತಮ ನಟಿ

ಪ್ರಗತಿವಾಹಿನಿ ಸುದ್ದಿ; ಲಾಸ್​ ಏಂಜಲೀಸ್: 2020ನೇ ಸಾಲಿನ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಘೋಷಣೆಯಾಗಿದ್ದು, ಕಳೆದ ವರ್ಷ ತೆರೆಕಂಡ ‘ಜೋಕರ್’ ಚಿತ್ರದ ನಟ ಜಾಕ್ವೀನ್ ಫಿನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದರೆ, ರೆನೀ ಜೆಲ್ವೆಗರ್​ಗೆ ‘ಜೂಡಿ’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಲಾಸ್​ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ 92ನೇ ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು, 2019ರಲ್ಲಿ ತೆರೆಕಂಡ ‘ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್’ ಸಿನಿಮಾದ ಉತ್ತಮ ನಟನೆಗಾಗಿ ನಟ ಬ್ರ್ಯಾಡ್ ಪಿಟ್​ಗೆ ಅತ್ಯುತ್ತಮ ಫೋಷಕ ನಟ ಪ್ರಶಸ್ತಿ ಲಭಿಸಿದೆ.

ಸೌತ್‌ ಕೋರಿಯಾದ ‘ಪ್ಯಾರಸೈಟ್‌’ ಚಿತ್ರವು ‘ಬೆಸ್ಟ್‌ ಮೋಷನ್‌ ಪಿಕ್ಚರ್‌ ಆಫ್‌ ದ ಇಯರ್‌’ ಗೌರವಕ್ಕೆ ಪಾತ್ರವಾಗಿದೆ. ಈ ಚಿತ್ರದ ನಿರ್ದೇಶಕ ಬಾಂಗ್‌ ಜೋನ್‌ ಹೋ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರೋಜರ್‌ ಡೀಕೆನ್ಸ್‌ ಅವರಿಗೆ ‘1917’ ಚಿತ್ರದ ಛಾಯಾಗ್ರಹಣಕ್ಕಾಗಿ ‘ಅತ್ಯುತ್ತಮ ಛಾಯಾಗ್ರಾಹಕ’ ಪ್ರಶಸ್ತಿ ದೊರೆತಿದೆ. ಮ್ಯಾರೇಜ್​ ಸ್ಟೋರಿ ಚಿತ್ರದ ಅಭಿನಯಕ್ಕಾಗಿ ಲೌರಾ ಡೆರ್ನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.