*ಟೈರ್ ಬ್ಲಾಸ್ಟ್‌ ಆಗಿ ಸೇತುವೆಯಿಂದ ಕೆಳಗೆ ಬಿದ್ದ ಕಾರು*: *ನಾಲ್ವರು ಸಜೀವ ದಹನ!*

ಪ್ರಗತಿವಾಹಿನಿ ಸುದ್ದಿ: ದೇವರ ದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದ ಐವರು ಆಪ್ತ ಸ್ನೇಹಿತರ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದ ವಾಹನ ಸೇತುವೆಯಿಂದ ಕೆಳಗೆ ಬಿದ್ದು ಬೆಂಕಿಗೆ ಆಹುತಿಯಾಗಿದೆ. ಕಾರಿನೊಳಗೆ ಸಿಲುಕಿದ ನಾಲ್ವರು ಯುವಕರು ಮೃತಪಟ್ಟಿದ್ದು, ಹೊರಗೆ ಬಿದ್ದಿದ್ದ ಮತ್ತೊಬ್ಬ ಯುವಕ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಾವರಿಯಾ ಸೇಠ್ ದೇವಾಲಯದಲ್ಲಿ ದರ್ಶನ ಪಡೆದು ಸ್ವಿಫ್ಟ್ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಸಾಂಗೋರ್ ಗ್ರಾಮದ ಐವರು ಸ್ನೇಹಿತರು ಭಾನುವಾರ ತಡರಾತ್ರಿ ಪ್ರಯಾಣಿಸುತ್ತಿದ್ದರು. ಸೇತುವೆ … Continue reading *ಟೈರ್ ಬ್ಲಾಸ್ಟ್‌ ಆಗಿ ಸೇತುವೆಯಿಂದ ಕೆಳಗೆ ಬಿದ್ದ ಕಾರು*: *ನಾಲ್ವರು ಸಜೀವ ದಹನ!*