*ಸಿಇಟಿ-ಸಕ್ಷಮ: ಜಿಲ್ಲೆಯಾದ್ಯಂತ ಸಿದ್ಧತಾ ಪರೀಕ್ಷೆ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳ  ಶೈಕ್ಷಣಿಕ ಉನ್ನತಿಗಾಗಿ ಆರಂಭಿಸಲಾಗಿರುವ “ಸಿ.ಇ.ಟಿ.-ಸಕ್ಷಮ್” ಸಿದ್ಧತಾ ಪರೀಕ್ಷೆಯು ಇಂದು ಶನಿವಾರ(ಸೆ.14) ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆಯಿತು. ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪರೀಕ್ಷೆಗೆ ದ್ವಿತೀಯ‌ ವರ್ಷದ ವಿದ್ಯಾರ್ಥಿಗಳು ಕೂಡ ಹಾಜರಾಗಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ‌ ಅವರಿಗೂ‌ ಕೂಡ‌ ಅವಕಾಶ ಕಲ್ಪಿಸಲಾಗಿತ್ತು ಎಂದು ಸಿಇಟಿ-ಸಕ್ಷಮ ಪರೀಕ್ಷೆಯ ರೂವಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ‌ ರಾಹುಲ್ ಶಿಂಧೆ ತಿಳಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ … Continue reading *ಸಿಇಟಿ-ಸಕ್ಷಮ: ಜಿಲ್ಲೆಯಾದ್ಯಂತ ಸಿದ್ಧತಾ ಪರೀಕ್ಷೆ ಯಶಸ್ವಿ*