*ಬೆಳಗಾವಿಯಲ್ಲಿ ಹಾಡಹಗಲೇ ಚೈನ್ ಸ್ನ್ಯಾಚಿಂಗ್*: *ತರಕಾರಿ ಖರೀದಿಗೆ ಬಂದಿದ್ದ ಮಹಿಳೆಯ ಸರ ಎಗರಿಸಿದ ಖದೀಮರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳ್ಳರ ಹಾವಳಿ ಮುಂದುವರಿದಿದ್ದು, ಹಾಡಹಗಲೇ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ನಡೆದಿದೆ. ಕಾಕತಿ ಗ್ರಾಮದಲ್ಲಿ ತರಕಾರಿ ಖರೀದಿಸಲು ಬಂದಿದ್ದ ಮಹಿಳೆಯನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು, ಆಕೆಯ ಚಲನವಲನವನ್ನು ಗಮನಿಸಿಕೊಂಡು ಹಿಂಬಾಲಿಸಿದ್ದಾರೆ. ಬಳಿಕ ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ, ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಕಿತ್ತುಕೊಂಡಿದ್ದಾರೆ. ಕೃತ್ಯ ಎಸಗಿದ ತಕ್ಷಣವೇ ಬೈಕ್‌ನಲ್ಲಿ ಸ್ಥಳದಿಂದ … Continue reading *ಬೆಳಗಾವಿಯಲ್ಲಿ ಹಾಡಹಗಲೇ ಚೈನ್ ಸ್ನ್ಯಾಚಿಂಗ್*: *ತರಕಾರಿ ಖರೀದಿಗೆ ಬಂದಿದ್ದ ಮಹಿಳೆಯ ಸರ ಎಗರಿಸಿದ ಖದೀಮರು*